Udupi | ನಲ್ಲಿ ಪ್ರೇಯಸಿ.. ಇದು ಪ್ರಿಯತಮನ ಮಾಸ್ಟರ್ ಪ್ಲಾನ್..
ಉಡುಪಿ : ಗೆಳತಿಯನ್ನು ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿ ಹಾಸ್ಟೆಲ್ನ ಒಳಗೆ ಯುವಕನೊಬ್ಬ ಕರೆದುಕೊಂಡು ಹೋದ ಘಟನೆ ಮಣಿಪಾಲದಲ್ಲಿ ನಡೆದಿದೆ. udupi-sneaking-girl-out-of-hostel-in-suitcase saaksha tv
ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್ ನ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಗೆಳತಿಯನ್ನು ಹಾಸ್ಟೆಲ್ ಗೆ ಕರೆದುಕೊಂಡು ಹೋಗಲು, ಆಕೆಯನ್ನು ದೊಡ್ಡ ಟ್ರಾವೆಲ್ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗಿದ್ದಾನೆ.
ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಚೆಕ್ ಮಾಡಿದ್ದಾರೆ. ಈ ಸಂದರ್ಭ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯುವಕ ಪ್ರಯತ್ನಿಸಿದ್ದಾನೆ.
ಸಂಶಯ ಬಂದು ಸೂಟ್ ಕೇಸ್ ತೆಗೆದು ನೋಡಿದಾಗ ಯುವತಿ ಹೊರಗೆ ಬಂದಿದ್ದಾಳೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಬಗ್ಗೆ ಮಣಿಪಾಲ ಪೊಲೀಸರನ್ನು ವಿಚಾರಿಸಿದರೇ ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ವಿವಿ ಕುಡ ಈ ಬಗ್ಗೆ ಮೌನವಾಗಿದೆ