ಕಟ್ಟಡ ಕುಸಿದು 5 ಕಾರ್ಮಿಕರ ಸಾವು Saaksha Tv
ಮುಂಬೈ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಪುಣೆಯ ಯೆರವಾಡ ಪ್ರದೇಶದಲ್ಲಿ ನಡೆದಿದೆ.
ಕಟ್ಟಡ ಮಾಲ್‌ಗಾಗಿ ನಿರ್ಮಾಣವಾಗುತ್ತಿತ್ತು. ಅದರ ನೆಲಮಾಳಿಗೆಯ ಪಾರ್ಕಿಂಗ್ ಮಹಡಿಯಲ್ಲಿ ಚಪ್ಪಡಿಗಳನ್ನು ಹಾಕಲು 16 ಎಂಎಂ ಗಾತ್ರದ ಕಬ್ಬಿಣದ ಸರಳುಗಳನ್ನು ತರಿಸಲಾಗಿತ್ತು. ಗುರುವಾರ ತಡರಾತ್ರಿ ಸರಳುಗಳು ಕುಸಿತದ ಪರಿಣಾಮ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರ ಮೇಲೆ ಬಿದ್ದಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಮಿಕರನ್ನು ಹೊರತೆಗೆಯಲಾಗಿದ್ದು, ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪುಣೆಯ ಟ್ರಾಫಿಕ್ ಪೊಲೀಸ್ ಕಮಿಷನರ್ ರಾಹುಲ್ ಶ್ರೀರಾಮೆ ತಿಳಿಸಿದ್ದಾರೆ.









