ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡಿದ್ದು, ಇಂದು ಒಂದೇ ದಿನ ದಾಖಲೆಯ 127 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಮಹಾ ಕಂಟಕ ಎದುರಾಗಿದ್ದು ಬರೋಬ್ಬರಿ 62 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.
ಇಂದು ಮಂಡ್ಯದಲ್ಲಿ ಒಂದೇ ದಿನ 62 ಮಂದಿಗೆ ಸೋಂಕು ತಗುಲಿದೆ. ಇನ್ನು ದಾವಣಗೆರೆಯಲ್ಲಿ 19, ಶಿವಮೊಗ್ಗ 12, ಕಲಬುರಗಿ 11, ಬೆಂಗಳೂರು 5, ಉಡುಪಿ 4, ಉತ್ತರ ಕನ್ನಡ 4, ಹಾಸನ 3, ಚಿಕ್ಕಮಗಳೂರು 2, ಗದಗ, ಯಾದಗಿರಿ, ವಿಜಯಪುರ ಮತ್ತು ಚಿತ್ರದುರ್ಗದಲ್ಲಿ ತಲಾ 1 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 127 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು 1373 ಪ್ರಕರಣಗಳ ಪೈಕಿ 530 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 802 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಪತ್ತೆಯಾಗಿರುವ 127 ಪ್ರಕರಣಗಳ ಪೈಕಿ 91 ಪ್ರಕರಣಗಳಿಗೆ ಮಹಾರಾಷ್ಟ್ರದ ಮುಂಬೈ ನಂಟಿದೆ.
ಇನ್ನು ಹೆಮ್ಮಾರಿ ಕೊರೊನಾ ವೈರಸ್ ಗೆ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೂ ಮೂರು ಮಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ 54 ವರ್ಷದ ಪುರುಷ ಹೃದ್ರೋಗದಿಂದ ಬಳಲುತ್ತಿದ್ದರು. ಇವರು 18ರಂದು ಅಸುನೀಗಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ.
ಬಳ್ಳಾರಿ ಮೂಲದ 61 ವರ್ಷದ ಪುರುಷ. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳ್ಳಾರಿಯಲ್ಲಿ 19 ಮೇ ರಂದು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಇರುವುದು ದೃಢವಾಗಿದೆ. ಮೊದಲೇ ಇಸ್ಕೆಮಿಕ್ ಹಾರ್ಟ್ ಡಿಸೀಸ್ ಯಿಂದ ಬಳಲುತ್ತಿದ್ದರು.
ವಿಜಯಪುರದ 65 ವರ್ಷದ ಪುರುಷ. ಮೊದಲೇ ಹೃದಯ ಸಂಬಂಧಿತ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರು. 18 ಮೇ ರಂದು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟರು. ನಂತರ ಕೊರೊನಾ ಸೋಂಕು ಇರುವುದು ದೃಢವಾಗಿದೆ.