ಒಪ್ಪೋ ಸ್ಮಾರ್ಟ ವಾಚ್ – 1 ಟೈಮ್ ಚಾರ್ಜ್ ನಲ್ಲಿ 14 ದಿನಗಳ ಬ್ಯಾಟರಿ ಬ್ಯಾಕಪ್
Oppo ಸಂಸ್ಥೆ ಹೊಸದಾಗಿ ವಾಚ್ ಪ್ರೀ ಎನ್ನುವ ಸ್ಮಾರ್ಟ್ ವಾಚ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ವಾಚ್ 1.64-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. 14 ದಿನಗಳ ಬ್ಯಾಟರಿ ಬ್ಯಾಕಪ್ ಇರಲಿದೆ ಎಂದು ಕಂಪನಿ ಹೇಳಿದೆ. ಇದು ವೇಗದ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡಲಿದೆ. ಕೇವಲ 5 ನಿಮಿಷಗಳ ಚಾರ್ಜ್‌ನಲ್ಲಿ, ಇದು ಒಂದು ದಿನದ ಬ್ಯಾಕಪ್‌ಗೆ ಚಾರ್ಜ್ ಆಗುತ್ತದೆ.
oppo ವಾಚ್ ಫ್ರೀ ಬೆಲೆ
ಕಂಪನಿಯು ಈ ಸ್ಮಾರ್ಟ್ ವಾಚ್ ಬೆಲೆ 5,999 ರೂ. ಇದೆ. ಮಾರುಕಟ್ಟೆಗೆ ಯಾವಾಗ ಬರಲಿದೆ ಎಂದು ಕಂಪನಿ ಮಾಹಿತಿ ನೀಡಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಗಡಿಯಾರವನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಅದರ ಬೆಲೆ CNY 549 (ಸುಮಾರು 6,400 ರೂ) ಇತ್ತು.
Oppo ವಾಚ್ ನ ವಿಶೇಷತೆಗಳು….
ಈ ವಾಚ್ 1.64-ಇಂಚಿನ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ರೆಸಲ್ಯೂಶನ್ 280×456 ಪಿಕ್ಸೆಲ್‌ಗಳು. ಡಿಸ್ಪ್ಲೆ 2.5D ಗಾಜಿನಿಂದ ರಕ್ಷಿಸಲಾಗಿದೆ. ವಾಚ್ ಬ್ಲೂಟೂತ್ v5.0 ಸಂಪರ್ಕದೊಂದಿಗೆ ಬರುತ್ತದೆ. ಇದು Android 6.0 ಮತ್ತು iOS 10.0 ಅಥವಾ ಅದಕ್ಕಿಂತ ಹೆಚ್ಚಿನ OS ಗೆ ಹೊಂದಿಕೊಳ್ಳುತ್ತದೆ.
ಹೃದಯ ಬಡಿತ ಸಂವೇದಕ, ರಕ್ತದ ಆಮ್ಲಜನಕದ ಶುದ್ಧತ್ವ (SpO2) ನಂತಹ ವೈಶಿಷ್ಟ್ಯಗಳು ವಾಚ್‌ನಲ್ಲಿ ಲಭ್ಯವಿದೆ. ಇದು ನಿಮ್ಮ ನಿದ್ರೆ ಮತ್ತು ಗೊರಕೆಯನ್ನು ಸಹ ಟ್ರ್ಯಾಕ್ ಮಾಡುತ್ತದೆ. 50 ಮೀಟರ್ ಆಳದ ನೀರಿನಲ್ಲಿ ಸರಾಗವಾಗಿ ಕೆಲಸ ಮಾಡುತ್ತದೆ.
Oppo ವಾಚ್ ಫ್ರೀ 230mAh ಬ್ಯಾಟರಿಯನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 33 ಗ್ರಾಂ ತೂಕವಿದೆ.








