ಅಸಾದುದ್ದೀನ್ ಓವೈಸಿ ಕ್ಷೇಮಕ್ಕಾಗಿ 100 ಮೇಕೆ ಬಲಿ ನೀಡಿದ ಉದ್ಯಮಿ…
ಸಂಸದ ಅಸಾದುದ್ದೀನ್ ಓವೈಸಿ ಅವರ ಕ್ಷೇಮ ಮತ್ತು ದೀರ್ಘಾಯುಶ್ಯಕ್ಕಾಗಿ ಉದ್ಯಮಿಯೊಬ್ಬ 100 ಮಕೆಗಳನ್ನ ಬಲಿ ನೀಡಿರು ಘಟನೆ ಹೈದರಾಬಾದ್ ನ ಬಾಗ್ ಎ ಜಹನಾರಾದಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಲಕಪೇಟೆ ಶಾಸಕ ಹಾಗು ಎಐಎಂಐಎಂ ಮುಖಂಡ ಅಹ್ಮದ್ ಬಲಾಲ ಉಪಸ್ಥಿತರಿದ್ದರು.
ಉತ್ತರ ಪ್ರದೇಶದ ಮೀರತ್ ನಿಂದ ದೆಹಲಿಗೆ ತೆರಳುತ್ತಿದ್ದಾಗ ಸಂಸದ ಓವೈಸಿ ಅವರ ಕಾರಿನ ಮೆಲೆ ಗುಂಡಿನ ದಾಳಿ ನಡೆದಿತ್ತು. ಯಾವುದೇ ತೊಂದರೆಯಾಗದೇ ಪಾರಾಗಿದ್ದರು. ಓವೈಸಿಯವರನ್ನ ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿರುವುದಾಗಿ ಆರೋಪಿ ಸಚಿನ್ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ತನಿಖೆ ವೇಳೆ ಬಿಜೆಪಿಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ. 101 goats sacrificed by Hyd bizman to pray for Owaisi after attack
ಫೆಬ್ರವರಿ 3 ರಂದು ನಡೆದ ದಾಳಿಯ ನಂತರ ಓವೈಸಿಗೆ z+ ಭದ್ರತೆಯನ್ನ ಗೃಹ ಸಚಿವಾಲಯ ಅನುಮೋದಿಸಿತ್ತು. ಆದರೆ ಇದನ್ನ ತಿರಸ್ಕರಿಸಿದ್ದರು. ನನ್ನ ಮೇಲೆ ದಾಳಿ ಮಾಡಿದವರು ಗಾಂಧಿಯನ್ನ ಕೊಂದವರು ಎಂದು ಉತ್ತರ ಪ್ರದೇಶದ ಭಾಗ್ಪತ್ ರ್ಯಾಲಿಯನ್ನ ಉದ್ದೇಶಿಸಿ ಓವೈಸಿ ಶನಿವಾರ ಹೇಳಿದ್ದರು.