4.0 ಲಾಕ್ ಡೌನ್ ಸಡಿಲಗೊಂಡ ಬಳಿಕ ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ಅನುಮತಿ ಸಿಕ್ಕಿತ್ತು. ಬಸ್ ಸಂಚಾರ ಶುರುವಾಗಿ ಎರಡನೇ ದಿನವಾದ ಇಂದು ನಿನ್ನೆಗಿಂತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಂಗಳೂರಿನ ಬಿಜೈನಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡು ಬಂದಿದೆ. ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಂತು ಬಸ್ ನಿಲ್ದಾಣದ ಒಳಗೆ ಆಗಮಿಸುತ್ತಿದ್ದಾರೆ.
ಇಂದು ಒಟ್ಟು 2000 ಬಸ್ಸುಗಳನ್ನು ನಿಗಮದ ವ್ಯಾಪ್ತಿಯ ವಿಭಾಗಗಳಿಂದ ಸಂಚಾರಕ್ಕೆ ಸಿದ್ದವಾಗಿವೆ. ಬೆಂಗಳೂರಿನಿಂದ 400 ( 300 ಬಸ್ಸು ಕೆಂಪೇಗೌಡ ಬಸ್ ನಿಲ್ದಾಣದಿಂದ + 100 ಬಸ್ಸು ಮೈಸೂರು ರಸ್ತೆ ಬಸ್ ನಿಲ್ದಾಣ ದಿಂದ) ಬಸ್ಸುಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ಸಂಚಾರ ಮಾಡಲಿವೆ. ಸಂಜೆ 7 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ಇರಲಿದೆ ಎಂದು ಕೆ.ಎಸ್.ಆರ್.ಟಿ.ಸಿಯ ಅಧಿಕಾರಿಗಳು ತಿಳಿಸಿದ್ದಾರೆ.








