ಪ್ರಿಯಕರನಿಗಾಗಿ 5 ಜನರನ್ನು ಕೊಲೆ ಮಾಡಿದ ಹಂತಕಿ ಅಂದರ್ Saaksha Tv
ಮಂಡ್ಯ: ಒಂದೇ ಕುಟುಂಬ ಐವರನ್ನ ಕೊಲೆ ಮಾಡಿದ್ದ ಹಂತಿಕಿಯನ್ನು ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 6ರಂದು ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ಒಂದೆ ಕುಟುಂಬದ 5 ಜನರನ್ನು ಕೊಲೆ ಮಾಡಲಾಗಿತ್ತು. ಕೊಲೆಯನ್ನು ಮಾಡಿದ ಆರೋಪಿ ಲಕ್ಷ್ಮಿಯನ್ನು ಕೆಆರ್ ಎಸ್ ಪೊಲೀಸರು ಎರಡೇ ದಿನದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಧ್ಯ ಪೊಲೀಸರು ತನಿಕೆ ನಡೆಸುತ್ತಿದ್ದು ಹಂತಕಿ ಲಕ್ಷ್ಮಿ ಕೊಲೆಗೆ ಕಾರಣವನ್ನು ಬಾಯಿಬಿಟ್ಟಿದ್ದಾಳೆ.
ಕೊಲೆಯಾದ ಮಹಿಳೆಯ ಪತಿ ಗಂಗಾರಾಮ್ ಅವರ ಜೊತೆ ಲಕ್ಷ್ಮಿ ಲವ್ವಿ ಡವ್ವಿ ನಡೆಸಿದ್ದಳು. ತನ್ನ ಪ್ರಿಯಕರನನ್ನು ಪಡೆಯಲು ಮಹಿಳೆ ಮಕ್ಕಳನ್ನ ಕೊಂದರೆ ಸಂಸಾರ ಮಾಡಬಹುದು ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾಳೆ. ಹೀಗಾಗಿ ಕೆ ಆರ್ ಎಸ್ ಗ್ರಾಮಕ್ಕೆ ಬಂದ ಹಂತಕಿ ಗಂಗಾರಾಮ್ ಅವರ ಮನೆಯಲ್ಲೇ ಇದ್ದು ಅವರ ಜೊತೆಯಲ್ಲೇ ರಾತ್ರಿ ಊಟ ಮಾಡಿ ಮಲಗಿದ್ದಳು.
ಬೆಳಗಾಗುವುದರೊಳಗಾಗಿ ಐವರನ್ನ ಕೊಂದು ಏನೂ ಗೊತ್ತಿಲ್ಲದ ಹಾಗೆ ನಾಟಕವಾಡಿದ್ದಳು. ಹಂತಕಿಯ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ಹಂತಕಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹಂತಕಿ ಸತ್ಯ ಬಾಯ್ಬಿಟ್ಟಿದ್ದಾಳೆ.







