Hijab | ಸಿದ್ದು, ರಾಹುಲ್, ಪ್ರಿಯಾಂಕಾ, ಕಮಲ್, ಮಲಾಲಾ.. ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್ hijab-Siddaramaiah Rahul Gandhi Priyanka Gandhi malala
ಬೆಂಗಳೂರು : ಹಿಜಾಬ್ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ, ನಟ ಕಮಲ್ ಹಾಸನ್, ನೊಬೆಲ್ ಪುರಸ್ಕೃತೆ ಮಲಾಲಾ ವಿರುದ್ಧ ಕಿಡಿಕಾರಿದೆ.
ಹಿಜಾಬ್ ವಿವಾದದ ಹಿಂದಿರುವ ಧ್ವನಿಗಳು-ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ!!! ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಅಲ್ಲದೆ ಒಡೆದು ಅಳುವ ನೀತಿ ಕಾಂಗ್ರೇಸ್ ಪಕ್ಷದ ಹುಟ್ಟು ಗುಣ. ಯುವ ಜನಾಂಗ ಈ ರೀತಿ ಇಬ್ಭಾಗವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಆರೋಪಿಸಿದೆ.
ಸಿದ್ದರಾಮಯ್ಯ ಟ್ವೀಟ್
ಹಿಜಾಬ್ ವಿವಾದದ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ ಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ.
ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ,ದೇಶ,ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ.ಇಲ್ಲಿಯ ವರೆಗೆ ಇವರ ಗೃಹಸಚಿವರು,ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು ಎಂದು ಪ್ರಶ್ನಿಸಿದ್ದಾರೆ.









