ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಚುನಾವಣೆ Saaksha Tv
ಉತ್ತರ ಪ್ರದೇಶ: ಪಂಚರಾಜ್ಯಗಳ ಚುನಾವಣೆಗಳ ಪೈಕಿ ಇಂದು ಉತ್ತರ ಪ್ರದೇಶದ ಮೊದಲ ಹಂತದ ಮತದಾನ ನಡೆಯಲಿದೆ.
ಇಂದು ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ, ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಳ್ಳಲಿದ್ದು ಸಂಜೆ 6 ಗಂಟೆವರೆಗೆ ನಡೆಯಲು ಅವಕಾಶ ಮಾಡಿಕೊಡಲಾಗಿದೆ.
ಕೊರೊನಾ ಮತ್ತು ಓಮೈಕ್ರಾನ್ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸಲು ಅವಕಾಶ ನೀಡಿದೆ.
ಮುಜಾಫರ್ನಗರ, ಮೀರತ್, ಭಾಗಪತ್, ಗಾಜಿಯಾಬಾದ್, ಶಾಮ್ಲಿ, ಹಂಪೂರ್, ಗೌತಮ್ ಬುದ್ಧನಗರ, ಬುಲದ್ಶಹರ್, ಅಲಿಘಡ, ಆಗ್ರಾ ಮತ್ತು ಮಥುರಾದಲ್ಲಿ ಮತದಾನವಾಗಲಿದೆ. ಒಟ್ಟು 623 ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳಲಿದ್ದು, ಒಟ್ಟು 2.27 ಕೋಟಿ ಜನರು ಮತದಾನ ಮಾಡಲಿದ್ದಾರೆ.
ಇಂದಿನ ಪಶ್ಚಿಮ ಉತ್ತರ ಪ್ರದೇಶದ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 9 ಸಚಿವರು ಕಣದಲ್ಲಿದ್ದು, ಇಂದು ಅವರ ಭವಿಷ್ಯ ನಿರ್ಧಾರವಾಗಲಿದೆ.