ದೇಶದಲ್ಲಿ ಹೊಸದಾಗಿ 67,084 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ Saaksha Tv
ನವದೆಹಲಿ: ಕಳೆದ 24 ಗಂಟೆಯಲ್ಲಿ 67,084 ಹೊಸ ಪ್ರಕರಣಗಳು ಮತ್ತೆಯಾಗಿವೆಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.
ಕೊರೊನಾ ಏರಿಕೆ ಪ್ರಮಾಣವು ದಿನಕ್ಕೆ ಶೇ 4.44 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು ಶೇ 6.58 ರಷ್ಟಿದೆ. ಇನ್ನೂ ಸಕ್ರಿಯ ಪ್ರಕರಣಗಳು 7,90,789 ಇದ್ದು, ಇದು ಶೇ 1.86 ಪ್ರಮಾಣದಷ್ಟಿದೆ. ಇನ್ನೂ 1,67,882 ಲಕ್ಷ ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು 96.95 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ 1,241 ಜನರು ಸಾವನ್ನಪ್ಪಿದ್ದಾರೆ. ಹಾಗೇ ಕಳೆದ 24 ಗಂಟೆಯಲ್ಲಿ 15,11,321 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇಲ್ಲಿವರೆಗೆ 171.28 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.









