Hijab Controvercy : ಸಿದ್ದರಾಮಯ್ಯ ಮಾತನಾಡಿದ ನಂತರವೇ ನಮ್ಮ ಮಂತ್ರಿಗಳು ರಿಯಾಕ್ಷನ್ ಕೊಟ್ಟಿರುವುದು : ಬಿಸಿ ನಾಗೇಶ್
ಹಿಜಬ್ ವಿಚಾರವಾಗಿ ಮಾತನಾಡಿರೋ ಶಿಕ್ಷಣ ಸಚಿವರು ಫೇಬ್ರವರಿ ೧ ರ ತನಕ ಯಾವುದೇ ರಾಜಕೀಯ ವಾಸನೆ ಇದರಲ್ಲಿ ಇರಲಿಲ್ಲ.. ಇದನ್ನ ನಾನು ಸ್ಪಷ್ಟವಾಗಿ ಹೇಳ್ತಿದ್ದೀನಿ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಹೇಳಿದಾಗಲೇ ಇದರಲ್ಲಿ ರಾಜಕೀಯ ವಾಸನೆ ಕಾಣಿಸಿದೆ.
ನಮ್ಮ ಯಾವುದೇ ಮಂತ್ರಿಗಳು ಸಿದ್ದರಾಮಯ್ಯ ಹೇಳಿಕೆ ಕೊಡುವ ಮೊದಲು ಸ್ಟೇಟ್ಮೆಂಟ್ ಕೊಟ್ಟಿಲ್ಲ. ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಮಂತ್ರಿಗಳು ರಿಯಾಕ್ಷನ್ ಕೊಟ್ಟಿದ್ದಾರೆ. ಉಡುಪಿಯಲ್ಲಿ 9 ಕಾಲೇಜುಗಳಿವೆ, ಆ ಯಾವ ಕಾಲೇಜಲ್ಲೂ ಬಾಲಕಿಯರು ಹಿಜಾಬ್ ಹಾಕಿಕೊಂಡು ಬಂದಿಲ್ಲ ಎಂದಿದ್ದಾರೆ.
ಇದೇ ವೇಳೆ ಶಾದಿಭಾಗ್ಯ ಯಾರು ಮಾಡಿದ್ದಾರೆ ಗೊತ್ತಿದೆ, ಅಲ್ಪ ಸಂಖ್ಯಾತ ತುಷ್ಡೀಕರಣ ಯಾರು ಮಾಡ್ತಿದ್ದಾರೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ..








