ಚಿರಂಜೀವಿ ಮೇಲೆ ಮುನಿಸಿಕೊಂಡ ಮಂಚು ಫ್ಯಾಮಿಲಿ tollywood- Manchu Family – Megastar Chiranjeevi saaksha tv
ಟಾಲಿವುಡ್ ನ ಬಿಗ್ ಬಾಸ್ ಯಾರು ಅಂದ್ರೆ ಎಲ್ಲರ ಬಾಯಲ್ಲೂ ಬರುವ ಉತ್ತರ ಮೆಗಾಸ್ಟಾರ್ ಚಿರಂಜೀವಿ. ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಅನ್ನೋದು ಕೇವಲ ಹೆಸರಾಗಿಲ್ಲ. ಬದಲಿಗೆ ಮೆಗಾ ಶಕ್ತಿಯಾಗಿದೆ. ಚಿತ್ರರಂಗಕ್ಕೆ ಬರುವ ಎಲ್ಲ ಪ್ರತಿಭೆಗಳಿಗೆ ಮೆಗಾಸ್ಟಾರ್ ಚಿರಂಜೀವಿ ಸ್ಫೋರ್ತಿಯಾಗಿದ್ದಾರೆ.
ತೆಲುಗು ಸಿನಿಮಾ ರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸ್ಟಾರ್ ಡೈರಕ್ಟರ್ ಯಿಂದ ಹಿಡಿದು ಲೈಟ್ ಬಾಯ್ ವರೆಗೂ ಗೌರವ ಕೊಡ್ತಾರೆ. ಈ ಎಲ್ಲರು ಚಿರು ಮೆಗಾ ಪೀಠವನ್ನೇ ಹಾಕಿದ್ದಾರೆ. ಆದ್ರೆ ನಟ ಮೋಹನ್ ಬಾಬು ಕುಟುಂಬ ಮಾತ್ರ ಇದಕ್ಕೆ ವಿರುದ್ಧವಾಗಿದೆ.
ಮೊದಲಿನಿಂದಲೂ ಮಂಚು ಕುಟುಂಬ ಮೆಗಾಸ್ಟಾರ್ ಬಗ್ಗೆ ಒಂದಲ್ಲಾ ಒಂದು ವಿಚಾರದಲ್ಲಿ ಟೀಕೆ ಮಾಡುತ್ತಲೇ ಇದೆ.
ಆದ್ರೂ ನಮ್ಮ ಮಧ್ಯೆ ಏನೂ ಇಲ್ಲ, ನಾವೆಲ್ಲಾ ಒಂದೇ ಅಂತಾ ಮಿಡಿಯಾಗಳ ಮುಂದೆ ಪೋಸ್ ಕೊಡುತ್ತಾ ಬಂದಿದ್ದರು.
ಆದ್ರೆ ಇತ್ತೀಚೆಗೆ ಈ ಇಬ್ಬರ ಮಧ್ಯೆಯ ಬಿರುಕು ಮತ್ತಷ್ಟು ದೊಡ್ಡದಾಗಿದೆ. ಮಾ ಎಲೆಕ್ಷನ್ ನಲ್ಲಿ ಶುರುವಾದ ಮುಸುಕಿನ ಗುದ್ದಾಟ ಈಗಲೂ ಮುಂದುವರೆದಿದೆ.
ಇದಕ್ಕೆ ತಾಜಾ ಉದಾಹರಣೆ.. ನಟ ಮಂಚು ವಿಷ್ಣು ಕೊಟ್ಟ ಹೇಳಿಕೆ..!!
ಹೌದು..! ಟಿಕೆಟ್ ದರ ನಿಗದಿ ವಿಚಾರವಾಗಿ ಆಂಧ್ರ ಸರ್ಕಾರ ಮತ್ತು ತೆಲುಗು ಸಿನಿಮಾರಂಗದ ಮಧ್ಯೆ ಯುದ್ಧವೇ ನಡೆಯುತ್ತಿದೆ.
ಹೀಗಾಗಿ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಟಾಲಿವುಡ್ ನ ಹಿರಿಯಣ್ಣ ಅಂತಾ ಬಿಂಬಿತವಾಗಿರುವ ಮೆಗಾಸ್ಟಾರ್ ಗೆ ಆಹ್ವಾನ ನೀಡಿದ್ದರು.
ಈ ಭೇಟಿ ಬಗ್ಗೆ ಇತ್ತೀಚೆಗೆ ನಟ ಮಂಚು ವಿಷ್ಣು ಅವರನ್ನ ಮಾಧ್ಯಮದವರು ಪ್ರಶ್ನಿಸಿದರು.
ಇದಕ್ಕೆ ಸಿಡಿಮಿಡಿಗೊಂಡಂತೆ ಉತ್ತರಿಸಿದ ವಿಷ್ಣು, ಟಾಲಿವುಡ್ ಒಬ್ಬರದ್ದಲ್ಲ. ಮೆಗಾಸ್ಟಾರ್ ಭೇಟಿಗೂ ಟಾಲಿವುಡ್ ಗೂ ಸಂಬಂಧವಿಲ್ಲ.
ಅದು ಕೆಲವರ ಲಾಭಕ್ಕಾಗಿ ಮಾಡಿರುವ ಭೇಟಿ ಎಂದು ಪರೋಕ್ಷವಾಗಿ ಚಿರಂಜೀವಿಗೆ ಟಾಂಗ್ ನೀಡಿದ್ದಾರೆ.
ಇನ್ನು ವಿಷ್ಣು ಹೇಳಿಕೆ ಮೆಗಾ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಮಂಚು ಕುಟುಂಬದ ಬಗ್ಗೆ ನಾನಾ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಟ್ರೋಲ್ ಗಳನ್ನು ಕೂಡ ಮಾಡಿ ವೈರಲ್ ಮಾಡುತ್ತಿದ್ದಾರೆ.