Gavaskar | ಪಂತ್ ಓಪನ್ ಮಾಡಿದ್ದು ನನಗೆ ಇಷ್ಟವಾಗಲಿಲ್ಲ sunil-gavaskar-surprised-see-rishabh-pant-as opener saaksha tv
ವೆಸ್ಟ್ ಇಂಡಿಸ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ರಿಷಬ್ ಪಂತ್ ಭಾರತದ ಪರ ಇನ್ನಿಂಗ್ಸ್ ಓಪನ್ ಮಾಡಿದ್ದರು.
ಇದಕ್ಕೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ವಿಕೆಟ್ ಕೀಪರ್ ರಿಷಬ್ ಪಂತ್ ಆರಂಭಿಕರಾಗಿದ್ದು ನನಗೆ ಇಷ್ಟು ಆಗಲಿಲ್ಲ.
ಅವರು ಆರು ಅಥವಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ಕೆ.ಎಲ್.ರಾಹುಲ್ ಲಭ್ಯರಿದ್ದರೂ, ಪಂತ್ ಗೆ ಬಡ್ತಿ ನೀಡಲಾಗಿತ್ತು.
ನಾಯಕ ರೋಹಿತ್ ಶರ್ಮಾ ಕೀಪರ್ ರಿಷಬ್ ಪಂತ್ ಗೆ ಓಪನರ್ ಆಗಿ ಚಾನ್ಸ್ ನೀಡಿದ್ದರು. ಆದ್ರೆ ಪಂತ್ ಓಪನರ್ ಆಗಿ ಮಿಂಚಲಿಲ್ಲ.
ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ ಪಂತ್, 18 ರನ್ ಗಳಿಸಿ ಓಡೆನ್ ಸ್ಮಿತ್ ಬೌಲಿಂಗ್ ನಲ್ಲಿ ಹೋಲ್ಡರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಈ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಮಾತನಾಡಿದ್ದು, “ರಿಷಭ್ ಪಂತ್ ಅವರನ್ನು ಆರಂಭಿಕರಾಗಿ ನೋಡಿದಾಗ ನನಗೆ ಆಘಾತವಾಯಿತು.
ನನ್ನ ಅಭಿಪ್ರಾಯದಲ್ಲಿ .. ಸ್ಕೋರ್‌ಗೆ ಅನುಗುಣವಾಗಿ ಅವರು ಆರನೇ ಅಥವಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರಬೇಕು. ಅವರು ಫಿನಿಷರ್ ಆಗಿರಬೇಕು.
ಆರಂಭಿಕ ಜೋಡಿಯಾಗಿ ರೋಹಿತ್‌ಗೆ ರಾಹುಲ್ ಸರಿಯಾದ ಜೋಡಿ. ಸೂರ್ಯಕುಮಾರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಒಳ್ಳೆಯದು.
ಅದರ ನಂತರ, ಪಂತ್ … ವಾಷಿಂಗ್ಟನ್ ಸುಂದರ್ ಬರಬೇಕು ಎಂದು ಹೇಳಿದ್ದಾರೆ.
ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಾಹುಲ್ ಉತ್ತಮ ಪ್ರದರ್ಶನ ನೀಡಿದರು. 102.08 ಸರಾಸರಿಯಲ್ಲಿ 48 ಎಸೆತಗಳಲ್ಲಿ 49 ರನ್ ಗಳಿಸಿದ್ದರು.









