National news – ವಿದೇಶಿ ಪ್ರಯಾಣಿಕರಿಗೆ ರಿಲೀಫ್ – 7 ದಿನ ಕ್ವಾರಂಟೈನ್ ಅಗತ್ಯವಿಲ್ಲ….
ಕೋವಿಡ್ ಮತ್ತು ಒಮಿಕ್ರಾನ್ ಕಾರಣಗಳಿಗಾಗಿ ವಿದೇಶದಿಂದ ಬರುವವರಿಗೆ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ, ವಿದೇಶದಿಂದ ಬರುವ ವ್ಯಕ್ತಿಗಳು 7 ದಿನಗಳ ಹೋಮ್ ಕ್ವಾರಂಟೈನ್ ಅಗತ್ಯವಿಲ್ಲ, ಆದರೆ ಪ್ರಯಾಣಿಕರು 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕಾಗುತ್ತದೆ.
ಸ್ವಯ ನಿಗಾವಹಿಸುವ ಸಮಯದಲ್ಲಿ ಪ್ರಯಾಣಿಕರಲ್ಲಿ ಕರೋನಾ ರೋಗಲಕ್ಷಣಗಳು ಕಾಣಿಸಿಕೊಂಡರೆ ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು ಮತ್ತು ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.
ಹೊಸ ಮಾರ್ಗಸೂಚಿಯ ಪ್ರಕಾರ, ಕರೋನಾ ಲಸಿಕೆಯನ್ನು ಸಂಪೂರ್ಣ ಡೋಸ್ ತೆಗೆದುಕೊಂಡ ಜನರು ಕರೋನಾದ ಆರ್ಟಿ-ಪಿಸಿಆರ್ ನೆಗಿಟಿವ್ ರಿಪೋರ್ಟ್ ತೋರಿಸುವ ಅಗತ್ಯವಿಲ್ಲ. ಹೊಸ ಮಾರ್ಗಸೂಚಿಗಳು ಫೆಬ್ರವರಿ 14 ರಿಂದ ಜಾರಿಗೆ ಬರಲಿವೆ.
ಹೊಸ ಮಾರ್ಗಸೂಚಿಗಳು
ವಿದೇಶದಿಂದ ಬಂದ ಮೇಲೆ 7 ದಿನಗಳ ಹೋಂ ಕ್ವಾರಂಟೈನ್ ಅಗತ್ಯವಿಲ್ಲ.
ಪ್ರಯಾಣಿಕರು 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು.
ಕರೋನಾ ಲಕ್ಷಣಗಳು ಕಂಡುಬಂದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಿ.
ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಕರೋನಾದ ಆರ್ಟಿ-ಪಿಸಿಆರ್ ನೆಗಟಿವ್ ವರದಿಯನ್ನು ತೋರಿಸಬೇಕಾಗಿಲ್ಲ.
ಅಪಾಯದಲ್ಲಿರುವ ದೇಶಗಳ ಪಟ್ಟಿ ಯಿಂದ 82 ದೇಶಗಳನ್ನು ಹೊರಗಿಡಲಾಗಿದೆ.
ನಿಷೇಧವನ್ನು 23 ಮಾರ್ಚ್ 2020 ರಂದು ವಿಧಿಸಲಾಯಿತು
DGCA ಪ್ರಕಾರ, ಅನುಮತಿಯ ನಂತರ ಈ ಸಮಯದಲ್ಲಿ ಸರಕು ವಿಮಾನಗಳು ಹಾರಾಟ ನಡೆಸಬಹುದು. ಇದರೊಂದಿಗೆ, ಬಯೋ ಬಬಲ್ ಒಪ್ಪಂದದ ಅಡಿಯಲ್ಲಿ ಹಾರುವ ವಿಮಾನಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತವೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ 23 ಮಾರ್ಚ್ 2020 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ.








