Rishabh Pant | ರಿಷಬ್ ಪಂತ್ ಗೆ ಪ್ರತಿಷ್ಠಾತ್ಮಕ ಪ್ರಶಸ್ತಿ rishabh-pant-win espn-cricinfo-awards-2021 saaksha tv
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ.
ಪಂತ್ 2021 ರ ಎಸ್ಪಿಎನ್ ಕ್ರಿಕ್ಇನ್ಫೋ ಅತ್ಯುತ್ತಮ ಟೆಸ್ಟ್ ಬ್ಯಾಟಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
2020-21 ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಗಬ್ಬಾ ಟೆಸ್ಟ್ನಲ್ಲಿ ಪಂದ್ಯಶ್ರೇಷ್ಠ ಇನ್ನಿಂಗ್ಸ್ಗಾಗಿ ಪಂತ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆ ಪಂದ್ಯದಲ್ಲಿ, ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ತಂಡ 329 ರನ್ ಗಳ ಗುರಿ ನೀಡಿತ್ತು. ಈ ಗುರಿಯನ್ನ ಬೆನ್ನತ್ತಿದ್ದ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು.
ಆ ಸಂದರ್ಭದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಅಜೇಯ 89 ರನ್ ಗಳೊಂದಿಗೆ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು. ಅಲ್ಲದೇ 32 ವರ್ಷಗಳಿಂದ ಗಬ್ಬಾದಲ್ಲಿ ಸೋಲನುಭವಿಸದ ಆಸ್ಟ್ರೇಲಿಯಕ್ಕೆ ಸೋಲಿನ ರುಚಿ ತೋರಿಸಿದ್ದರು. ಈ ಪ್ರದರ್ಶನಕ್ಕಾಗಿ ಪಂತ್ ಗೆ ಪ್ರಶಸ್ತಿ ಲಭಿಸಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಟಿಸಿದ ಇತರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಟೆಸ್ಟ್ ಬೌಲಿಂಗ್ ಪ್ರಶಸ್ತಿ ಕೈಲ್ ಜೇಮಿಸನ್ ಗೆ ಸಿಕ್ಕಿದೆ. ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಪ್ರಶಸ್ತಿ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಗೆ ಸಿಕ್ಕಿದೆ.
ಏಕದಿನ ಬ್ಯಾಟಿಂಗ್ ಅವಾರ್ಡ್ ಫಖರ್ ಜಮಾನ್ ಗೆ, ಏಕದಿನ ಬೌಲಿಂಗ್ ಪ್ರಶಸ್ತಿ ಸಕಿಬ್ ಮಹಾಮೂದ್ ಗೆ, ಟಿ 20 ಬ್ಯಾಟಿಂಗ್ ಪ್ರಶಸ್ತಿ ಜೋಸ್ ಬಟ್ಲರ್ ಗೆ, ಟಿ 20 ಬೌಲಿಂಗ್ ಪ್ರಶಸ್ತಿ ಪಾಕ್ ನ ಷಾಹಿನ್ ಅಫ್ರಿದಿಗೆ ಸಿಕ್ಕಿದೆ.









