ಭಾರತದ ಮೊದಲ ಬುಲೆಟ್ ಟ್ರೈನ್ ನಿಲ್ದಾಣ ಸೂರತ್ ನಲ್ಲಿ ನಿರ್ಮಾಣ…
ಗುಜರಾತ್ ನ ಸೂರತ್ ನಲ್ಲಿ ದೇಶದ ಮೊಟ್ಟ ಮೊದಲು ಬುಲೆಟ್ ಟ್ರೈನ್ ನಿಲ್ದಾಣವನ್ನು ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳಲಿರುವ ರೈಲು ನಿಲ್ದಾಣದ ಚಿತ್ರ ವಿವರಣೆಯನ್ನು ಟ್ವೀಟ್ ನಲ್ಲಿ ಗುರುವಾರ ಹಂಚಿಕೊಂಡಿದ್ದಾರೆ.
ಬುಲೆಟ್ ರೈಲು ನಿಲ್ದಾಣವು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ನಿರ್ಮಿಸಲಾದ ಮೊದಲ ನಿಲ್ದಾಣವಾಗಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ದೇಶದ ಮೊದಲ ಬುಲೆಟ್ ರೈಲು ಮಾರ್ಗವಾಗಿದೆ. ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
https://twitter.com/DarshanaJardosh/status/1491633994714136576?ref_src=twsrc%5Etfw%7Ctwcamp%5Etweetembed%7Ctwterm%5E1491633994714136576%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Findia-news
508.17 ಕಿಲೋಮೀಟರ್‌ಗಳ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ 155.76 ಕಿಮೀ ಮಹಾರಾಷ್ಟ್ರದಲ್ಲಿ, 384.04 ಕಿಮೀ ಗುಜರಾತ್‌ನಲ್ಲಿ ಮತ್ತು 4.3 ಕಿಮೀ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಬರಲಿದೆ. Surat to get India’s 1st bullet train station, Union minister tweets 1st look.
ಸೂರತ್ ಹೊರತುಪಡಿಸಿ, ಇನ್ನೂ ಮೂರು ನಿಲ್ದಾಣಗಳಾದ ವಾಪಿ, ಬಿಲಿಮೋರಾ ಮತ್ತು ಭರೂಚ್‌ಗಳ ಕೆಲಸವನ್ನು ವೇಗಗೊಳಿಸಲಾಗಿದೆ ಮತ್ತು ಎಲ್ಲಾ ನಾಲ್ಕು ನಿಲ್ದಾಣಗಳು ಡಿಸೆಂಬರ್ 2024 ರ ವೇಳೆಗೆ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬುಲೆಟ್ ರೈಲು ಯೋಜನೆಯು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಥಾಣೆ, ವಿರಾರ್, ಬೋಯ್ಸರ್, ವಡೋದ್ರಾ ಅಹಮದಾಬಾದ್ ಮತ್ತು ಸಬರಮತಿಯಲ್ಲಿ ನಿಲ್ದಾಣಗಳನ್ನು ಹೊಂದಿರುತ್ತದೆ. ಯೋಜನೆಯ ವೆಚ್ಚ 1 ಲಕ್ಷ ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.








