Mohan Babu | ಸನ್ ಆಫ್ ಇಂಡಿಯಾ ಟ್ರೈಲರ್ ರಿಲೀಸ್.. mohan-babu-son-india-trailer-released
ಪ್ರಪಂಚದಲ್ಲಿ ಯಾವುದೇ ಹೋರಾಟವಾದ್ರೂ ಒಬ್ಬರಿಂದಲೇ ಶುರುವಾಗುತ್ತದೆ ಅನ್ನೋ ಮೋಹನ್ ಬಾಬು ಡೈಲಾಗ್ ನೊಂದಿಗೆ ಸನ್ ಆಫ್ ಇಂಡಿಯಾ ಟ್ರೈಲರ್ ರಿಲೀಸ್ ಆಗಿದೆ.
ಮಂಚು ಮೋಹನ್ ಬಾಬು ಹೀರೋ ಆಗಿ ಡೈಮಂಡ್ ರತ್ನಬಾಬು ನಿರ್ದೇಶನದಲ್ಲಿ ಸೆಟ್ಟೇರಿದ ಚಿತ್ರ ಸನ್ ಆಫ್ ಇಂಡಿಯಾ.
24 ಫ್ರೇಮ್ಸ್ ಫ್ಯಾಕ್ಟರಿ, ಶ್ರೀ ಲಕ್ಷ್ಮಿ ಪ್ರಸನ್ನ ಪಿಕ್ಚರ್ಸ್ ಬ್ಯಾನರ್ ಜೊತೆಯಾಗಿ ವಿಷ್ಣು ಮಂಚು ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಈ ಚಿತ್ರ ಇದೇ ತಿಂಗಳ 18 ರಂದು ರಿಲೀಸ್ ಆಗಲಿದೆ. ಈ ಹಿನ್ನೆಲೆ ಇಂದು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
ಈ ಸಿನಿಮಾದಲ್ಲಿ ಮೋಹನ್ ಬಾಬು ಹೀರೋ ಆಗಿ ನಟಿಸೋದು ಅಲ್ಲದೇ, ಸ್ಕ್ರೀನ್ ಪ್ಲೇ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಈ ಚಿತ್ರದಲ್ಲಿ ಶ್ರೀಕಾಂತ್, ತನಿಕೆಲ್ಲ ಭರಣಿ, ಅಲಿ, ಪ್ರಗ್ಯಾ ಜೈಸ್ವಾಲ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಇಳಯರಾಜಾ ಸಂಗೀತವಿದೆ.