Hijab Controvercy : ಒಡೆಯುವಂತಹ ಗ್ಯಾಂಗ್ ಗಲಭೆ ಮಾಡಿದೆ : ರಘುಪತಿ ಭಟ್
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಬ್ – ಕೇಸರಿ ಶಾಲು ಸಂಘರ್ಷ ಇದೀಗ ರಾಷ್ಟ್ರೀಯ ಅಷ್ಟೇ ಅಲ್ದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ.. ಹೈಕೋರ್ಟ್ ಈ ಸಂಬಂಧ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡುವ ಜೊತೆಗೆ ಮಧ್ಯಂತರ ತೀರ್ಪಿನಲ್ಲಿ ಮುಂದಿನ ಆದೇಶದ ವರೆಗೂ ಯಾರೂ ಧಾರ್ಮಿಕ ಗುರುತುಗಳನ್ನು ಧರಿಸಿ ಶಾಲಾ ಕಾಲೇಜಿಗೆ ಹೋಗುವಂತೆ ಇಲ್ಲ ಎಂದು ಆದೇಶ ಹೊರಡಿಸಿದೆ..
ಸೀ ಬಗ್ಗೆ ಉಡುಪಿಯಲ್ಲಿ ರಘುಪತಿ ಭಟ್ ಅವರು ಪ್ರತಿಕ್ರಿಯೆ ನೀಡಿದ್ದು , ತುಕಡೆ ಗ್ಯಾಂಗ್ ದೇಶ ಒಡೆಯುವಂತಹ ಗ್ಯಾಂಗ್ ಗಲಭೆ ಮಾಡಿದೆ. ಉಡುಪಿಯಲ್ಲಿ ಆರಂಭವಾದ ವಿವಾದ ಇಡೀ ರಾಷ್ಟ್ರಕ್ಕೆ ವ್ಯಾಪಿಸಿದೆ. ಇದರ ಹಿಂದೆ ಅಂತರ್ರಾಷ್ಟ್ರೀಯ ಸಂಚು ಇರುವ ಬಗ್ಗೆ ಗುಮಾನಿ ಇದೆ,, ಈ ಬಗ್ಗೆ ಗೃಹಸಚಿವ ಅರಗ ಜ್ಞಾನೆಂದ್ರ ಅವರಿಗೆ ದೂರು ನೀಡುತ್ತೇನೆ ಎಂದಿದ್ದಾರೆ…
ಅಲ್ಲದೇ ಸುಪ್ರೀಂಕೋರ್ಟ್ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಕಾನೂನುಬಾಹಿರ ಎಂದು ಬರೆದುಕೊಂಡಿದ್ದಾರೆ. ಸಿಎಫ್ಐ ಪಿಎಫ್ಐ ಸಂಘಟನೆಗೆ ವಿದ್ಯಾರ್ಥಿಗಳನ್ನು ದಾಳ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ..