ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 12 ಎಲೆಟ್ರಿಕ್ ದ್ವಿಚಕ್ರ ವಾಹನ ವಿತರಣೆ Saaksha Tv
ಬೆಂಗಳೂರು: ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 12 ಇ-ಸಂಜೀವಿನಿ ದ್ವಿಚಕ್ರ (Electric Vehicles) ಗಳನ್ನು ರೋಟರಿ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ಉಚಿತವಾಗಿ ನೀಡಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆಗಳಿಗಾಗಿ 12 ಇ-ಸಂಜೀವಿನಿ (Electric Vehicles) ಗಳನ್ನು ರೋಟರಿ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ಉಚಿತವಾಗಿ ಹಸ್ತಾಂತರಿಸಿದವು.
ಈ ಹಿಂದೆ ಸಂಜಯ್ ನಗರ ವಾರ್ಡ್ ನಲ್ಲಿರುವ ನಗರ ಪ್ರಾಥಮಿಕ ಕೇಂದ್ರಕ್ಕೆ ಪ್ರಯೋಗಿಕವಾಗಿ 2 ಇ-ಸಂಜೀವಿನಿ ವಾಹನಗಳನ್ನು ಹಸ್ತಾಂತರಿಸಿದ್ದರು. ಅದು ಯಶಸ್ವಿಯಾದ ಹಿನ್ನಲೆ ಇಂದು ಪೂರ್ವ ವಲಯ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ 12 ಪರಿಸರ ಸ್ನೇಹಿ ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಭೈರತಿ ಸುರೇಶ, ರೋಟರಿ ರಾಜಮಹಲ್ ವಿಲಾಸ್ ಜನರಿಗೆ ಸಹಾಯ ಮಾಡುತ್ತಿರುವ ಸಂಸ್ಥೆಯಾಗಿದ್ದು, ಕೊರೊನಾ ಸಮಯದಲ್ಲಿ ಪಾಲಿಕೆಯ ಜೊತೆ ಕೈಜೋಡಿಸಿ ಬಹಳಷ್ಟು ಕಲೆಸ ಮಾಡಿದೆ ಎಂದು ಹೇಳಿದ್ದಾರೆ.








