devdpd07 is SOLD to rajasthanroyals for INR 7.75 Crore
IPL 2022 LIVE Auction | ರಾಯಲ್ಸ್ ಪಾಲಾದ ದೇವದತ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಯುವ ಬ್ಯಾಟರ್ ದೇವದತ್ ಪಡಿಕಲ್ ರಾಯಲ್ಸ್ ಪಾಲಾಗಿದ್ದಾರೆ.
ದೇವದತ್ ಪಡಿಕಲ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಯಲ್ಸ್ ತಂಡಗಳು ಪೈಪೋಟಿ ನಡೆಸಿದರು.
ಅಂತಿಮವಾಗಿ 2 ಕೋಟಿ ಮುಖ ಬೆಲೆಯ ಪಡಿಕಲ್ ಅವರನ್ನು ರಾಯಲ್ಸ್ ಪಡೆದುಕೊಂಡಿದೆ.
ರಾಯಲ್ಸ್ ತಂಡ ದೇವದತ್ ಗೆ ಬರೋಬ್ಬರಿ 7.75 ಕೋಟಿ ರುಪಾಯಿ ನೀಡಿದೆ.
ದೇವದತ್ ಪಡಿಕಲ್ ಕಳೆದ ಕೆಲ ಸೀಸನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಅಲ್ಲದೇ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದರು.









