Session 2022 : ಜಂಟಿ ಅಧಿವೇಶನ – ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿ ಗೋಷ್ಠಿ
ಸೋಮವಾರದಿಂದ ಜಂಟಿ ಅಧಿವೇಶನ ಪ್ರಾರಂಭದ ಹಿನ್ನೆಲೆ , ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿ ಗೋಷ್ಠಿ ನಡೆಸಿದರು… ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು , ನಾನು ಮತ್ತು ಸಭಾಪತಿ ,ಕಾರ್ಯದರ್ಶಿಗಳು ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದೇವೆ..
ಜಂಟಿ ಅಧಿವೇಶನ ಆಹ್ವಾನಿಸಿ ಬಂದಿದ್ದೇವೆ. ಈ ವರ್ಷದ ಮೊದಲ ಅಧಿವೇಶನ. 14 ನೇ ತಾರೀಖು ರಾಜ್ಯಪಾಲರು ಭಾಷಣ ಮಾಡ್ತಾರೆ. ಗ್ಯಾಂಡ್ ಸ್ಟೆಪ್ ಮೂಲಕ ರಾಜ್ಯಪಾಲರು ಬರ್ತಾರೆ. ಈ ಸಂಪ್ರದಾಯ ಮೊದಲಿಂದಲೂ ಇತ್ತು.. ಜಂಟಿ ಭಾಷಣ ಮುಗಿದ ಬಳಿಕ ಸದನ ಕೆಲ ಮುಂದೂಡಲಾಗುತ್ತದೆ. ಇದಾದ ಮೇಲೆ ಶ್ರದ್ಧಾಂಜಲಿ ಮಂಡನೆ ಆಗುತ್ತದೆ. ರಾಜ್ಯಪಾಲರ ಭಾಷಣ ವಂದನಾ ಚರ್ಚೆ ಆಗುತ್ತದೆ. ಸದನದ ಕಾರ್ಯಕಲಾಪಗಳು ಎಲ್ಲವೂ ನಡೆಯುತ್ತವೆ.
ಎರಡು ವಿಧೇಯಕಗಳು ನಮ್ಮ ಕಚೇರಿಗೆ ತಲುಪಿವೆ. ಕರ್ನಾಟಕ ಸ್ಟ್ಯಾಂಪ್ ವಿಧೇಯಕ. ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ. ಸಈ ಎರಡು ಬಿಲ್ ಗಳು ಬಂದಿವೆ. ಎರಡು ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ. ಹಾಲ್ ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಉಳಿದಂತೆ ಈ ಹಿಂದೆ ಏನು ವ್ಯವಸ್ಥೆ ಏನಿತ್ತೋ..ಆ ವ್ಯವಸ್ಥೆ ಇರುತ್ತದೆ . ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಬಾರಿ ಸಾರ್ವಜನಿಕರಿಗೆ ಸದನ ನೋಡಲು ಅವಕಾಶ ಇರುತ್ತದೆ. ಆದ್ರೆ ಕೋವಿಡ್ ರೂಲ್ಸ್ ಫಾಲೋ ಮಾಡಬೇಕು ಎಂದಿದ್ದಾರೆ..