Politics : ಹರತಾಳು ಹಾಲಪ್ಪ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಮಿಷನ್ ಆರೋಪ : ಆಣೆ ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಬಂದ ಶಾಸಕರು
ಮಂಗಳೂರು : ಹರತಾಳು ಹಾಲಪ್ಪ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಮಿಷನ್ ಆರೋಪದ ವಿಚಾರವಾಗಿ ಆಣೆ ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದ್ದರು..
ಶಾಸಕ ಹಾಲಪ್ಪ ಆಣೆ ಪ್ರಮಾಣದ ಬಳಿಕ ಬೇಳೂರು ಗೋಪಾಲಕೃಷ್ಣ ದೇವಾಲಯಕ್ಕೆ ಆಗಮಿಸಿದ್ದರು..
ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿ ಶ್ರೀ ಮಂಜುನಾಥನ ದರ್ಶನ ಪಡೆದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಣೆಪ್ರಮಾಣ ಮಾಡಿದ್ದಾರೆ..
ಈ ವೇಳೆ ಮಾತನಾಡಿ ನಾವು ಬರೋತನಕ ಶಾಸಕರು ನಿಲ್ಲ ಬಹುದಿತ್ತು. ದೇವಾಲಯಕ್ಕೆ ಬಂದು ಯಾಕೆ ಓಡಿದ್ದು ಎಂದು ಹರತಾಳು ಹಾಲಪ್ಪಗೆ ಟಾಂಟ್ ಕೊಟ್ಟಿದ್ದಾರೆ..
ನೋಟಿಸ್ ನೀಡಿದ ಮೇಲೆ ನಾವು ಬರೋತನಕ ನಿಲ್ಲ ಬಹುದಿತ್ತು. ನಾನು ದೇವರೆದುರು ಆಣೆ ಪ್ರಮಾಣ ಮಾಡಲು ಬಂದಿದ್ದೇನೆ, ಮಂಜುನಾಥ ಸ್ವಾಮಿ ಎದುರು ಆಣೆ ಪ್ರಮಾಣ ಮಾಡಿದ್ದೇನೆ. ಶಾಸಕ ಹಾಲಪ್ಪ ಅವರ ವಿರುದ್ಧ ನಾನು ಮಾಡಿರುವ ಆರೋಪಗಳು ಸತ್ಯ ಎಂದಿದ್ದಾರೆ…
ಅಲ್ಲದೇ ನನ್ನೊಂದಿಗೆ ಸಾಕ್ಷಿಗಳು ಬಂದಿದ್ದಾರೆ.. ಕಮಿಷನ್ ನೀಡಿದವರು ಬಂದಿದ್ದಾರೆ.. ಹಾಲಪ್ಪ ಅವರು ತಮ್ಮ ಆಪ್ತ ವಿನಾಯಕ್ ರಾವ್ ಅವರ ಮೂಲಕ ಮರಳು ಲಾರಿ ಮಾಲಿಕರಿಂದ ಕಮಿಷನ್ ಪಡೆದಿದ್ದಾರೆ. ದೇವರೆದುರು ಸಾಕ್ಷಿಯಾಗಿ ಆಣೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಹಾಲಪ್ಪ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ…