IPL 2022 LIVE Auction | Rahul Tripathi is SOLD to SunRisers for INR 8.5 crore
IPL 2022 LIVE Auction | ರಾಹುಲ್ ತ್ರಿಪಾಟಿಗೆ ಜಾಕ್ ಪಾಟ್.. 8.5 ಕೋಟಿ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಯುವ ಬ್ಯಾಟರ್ ರಾಹುಲ್ ತ್ರಿಪಾಟಿಗೆ ಜಾಕ್ ಪಾಟ್ ಹೊಡೆದಿದೆ.
40 ಲಕ್ಷ ಮೂಲ ಬೆಲೆ ಹೊಂದಿದ್ದ ರಾಹುಲ್ ತ್ರಿಪಾಟಿಗೆ ಬರೋಬ್ಬರಿ 8.5 ಕೋಟಿ ರೂಪಾಯಿ ಸಿಕ್ಕಿದೆ.
ಸನ್ ರೈಸರ್ಸ್ ಮತ್ತು ಚೆನ್ನೈ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರಾಹುಲ್ ಖರೀದಿಗೆ ಮುಗಿಬಿದ್ದವು.
ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ 8.5 ಕೋಟಿಗೆ ತ್ರಿಪಾಟಿ ಅವರನ್ನ ಖರೀದಿಸಿದೆ.









