ಯುವತಿ ಮೇಲೆ ಗ್ಯಾಂಗ್ ರೇಪ್ – ಕಟ್ಟಡದಿಂದ ಹೊರಗೆ ಎಸೆದ ಪಾಪಿಗಳು Saaksha Tv
ರಾಜಸ್ಥಾನ: ಇಂಟರ್ವ್ಯೂಗಾಗಿ ಬಂದಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಮಹಡಿಯ ಕಿಟಕಿಯಿಂದ ಹೊರಗೆ ಎಸೆದ ಘಟನೆ ರಾಜಸ್ಥಾನದ ಚುರು ರೈಲು ನಿಲ್ದಾಣದ ಬಳಿ ನಡೆದಿದೆ.
ಒಬ್ಬ ಆಕೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ದರಿಂದ ಸಂತ್ರಸ್ತೆ ನವದೆಹಲಿಯಿಂದ ರಾಜಸ್ಥಾನಕ್ಕೆ ಚುರುವಿಗೆ ಬಂದಿದ್ದಳು. 25 ವರ್ಷದ ಸಂತ್ರಸ್ತೆ ಆತನ ಮಾತನ್ನು ನಂಬಿಕೊಂಡು ಇಂಟರ್ವ್ಯೂಗಾಗಿ ಬಂದಿದ್ದಳು. ಕೆಲಸದ ಆಮೀಷ ಒಡ್ಡಿದ ವ್ಯಕ್ತಿ ಮತ್ತು ಇನ್ನೂ ಮೂವರು ಸೇರಿ ಚುರು ರೈಲು ನಿಲ್ದಾಣದ ಬಳಿ ಇರುವ ಆಕೆಯನ್ನು ಹೋಟೆಲ್‍ಗೆ ಕರೆದೊಯ್ದರು.
ನಂತರ ಆಕೆಯ ಮೇಲೆ ದೇವೇಂದ್ರ ಸಿಂಗ್ ಮತ್ತು ವಿಕ್ರಮ್ ಸಿಂಗ್ ಮೊದಲಿಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ ಹೋಟೆಲ್‍ನ ಮೊದಲ ಮಹಡಿಯ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಉಳಿದ ಇನ್ನಿಬ್ಬರು ಆರೋಪಿಗಳನ್ನು ಭವಾನಿ ಸಿಂಗ್ ಮತ್ತು ಸುನೀಲ್ ರಜಪೂತ್ ಎಂದು ಗುರುತಿಸಲಾಗಿದ್ದು, ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಎಸ್‍ಪಿ ಮಮತಾ ಸಾರಸ್ವತ್ ಹೇಳಿದ್ದಾರೆ.









