ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಕಾರ ಪಂಕ್ಚರ್ ಆದ ಬಸ್: ಸಿ.ಎಂ. ಇಬ್ರಾಹಿಂ Saaksha Tv
ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಕಾರ ಪಂಕ್ಚರ್ ಆದ ಬಸ್. ಯಾವಾಗ ಬೇಕಾದರೂ ನಿಲ್ಲಬಹುದು ನನ್ನ ಪ್ರಕಾರ ಏಪ್ರಿಲ್, ಮೇ ವೇಳೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ಎಂಎಲ್ ಸಿ ಸಿ. ಎಂ. ಇಬ್ರಾಹಿಂ ಹೇಳಿದ್ದಾರೆ.
ದಾವಣಗೆರಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರಿಗೆ ರಾಮ ಮಂದಿರ ಆಯಿತು, ಗೋ ಹತ್ಯೆ ನಿಷೇಧ ಆಯಿತು ಈಗ ಹಿಜಾಬ್ ಹಿಡಿದುಕೊಂಡಿದ್ದಾರೆ. ಹಿಜಾಬ್ ಅಂದರೆ ಅವರಿಗೆ ಅರ್ಥವೂ ಗೊತ್ತಿಲ್ಲ ಅನಗತ್ಯ ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರು.
ಅಲ್ಲದೇ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ನಿಶಕ್ತರಾಗಿದ್ದಾರೆ, ಡಿಕೆಶಿ ಕೇಳಿದರೆ ಮೇಲಿನವರತ್ತ ಕೈ ತೋರುತ್ತಾರೆ. ನಮ್ಮ ಶಕ್ತಿ ನಮ್ಮ ಶತೃವಾಗಿದೆ. ಕಾಂಗ್ರೆಸ್ ನಿಂದ ಬಹಳಷ್ಟು ಜನರು ಪಕ್ಷ ತೊರೆಯಲಿದ್ದಾರೆ. ಡ್ಯಾಂ ಒಡೆದಾಗ ಹೇಗೆ ನೀರು ಹೊರಬರುತ್ತೋ ಅದೇ ರೀತಿ ಕಾಂಗ್ರೆಸ್ ನಲ್ಲಿದ್ದವರು ಆಚೆ ಬರುತ್ತಾರೆ ಎಂದು ತಿಳಿಸಿದರು.
ಮುಂದುವರೆದು ಮನವೋಲಿಸುವುದರಿಂದ ಏನೂ ಆಗಲ್ಲ, ಹೈಕಮಾಂಡ ಸೂಕ್ತ ಪರಿಹಾರ ಕಂಡುಕೊಳ್ಳಬೇಕಷ್ಟೇ. ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಯಲಿದೆ. ಬಳಿಕ ಬೆಳಗಾವಿಯಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಮಾಡುತ್ತೇವೆ. ಅಧಿವೇಶನದಲ್ಲಿ ಗೋ ಹತ್ಯೆ ಬಿಲ್ ಮಂಡನೆಯಿಂದೆ. ಈಗ ನಾನು ರಾಜಿನಾಮೆಎ ನೀಡಿದರೆ ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಾಗಿ ಸೆಷನ್ ಮುಗಿದ ನಂತರ ರಾಜಿನಾಮೆ ಬಗ್ಗೆ ನಿರ್ಧರಿಸುತ್ತೇನೆ ಎಂದರು.