Hijab Controvercy : ಇದು ಬಿಜೆಪಿವರು ಮಾಡಿದ ರಾಜಕೀಯ : ಜಮೀರ್ ಅಹ್ಮದ್
ಹುಬ್ಬಳ್ಳಿ : ನಂಗೆ ವಿಶ್ವಾಸವಿದೆ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ… ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೋಗಲ್ಲ , ಸಿದ್ದರಾಮಯ್ಯ ಅವರನ್ನ ಬಿಟ್ಟು ಅವರು ಹೊಗಲ್ಲ. ಮೊನ್ನೆ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ನಮ್ಮ ಹಿರಿಯ ನಾಯಕರು ಇಬ್ರಾಹಿಂ ಅವರನ್ನ ಮನವೋಲಿಸಿದ್ದಾರೆ. ಅವರ ಎದರು ನಾನು ಬಚ್ಚಾ, ನನ್ನ ನಾಯಕರು ಅವರು. ಅವರು ಒಪ್ಕೊಂಡಿದ್ದಾರೆ,ಪಕ್ಷ ಬಿಟ್ಟು ಹೋಗಲ್ಲ ಅಂತ ಹೇಳಿದ್ದಾರೆ…
ಇದೇ ವೇಳೆ ಸಿಎಂ ಇಬ್ರಾಹಿಂ 40 ಕೋಟಿ ಸಾಲದ ಬಗ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಮ್ಮ ಮುಂದೆ ಅವರು ಸಾಲದ ಬಗ್ಗೆ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.. ಇದೇ ವೇಳೆ ಹಿಜಾಬ್ ವಿವಾದದ ಬಗ್ಗೆ ಮಾತನಾಡಿ ಇದು ನಿನ್ನೆ ಇವತ್ತಿನದಲ್ಲ,ತುಂಬ ಹಿಂದಿನಿಂದ ನಮ್ಮ ಸಮುದಾಯದವರು ಹಾಕಿಕೊಂಡು ಬರುತ್ತಿದ್ದಾರೆ.
ಹಿಜಾಬ್ ಪ್ರಕರಣ ನ್ಯಾಯಲಯದಲ್ಲಿದೆ. ಹೀಗಾಗೇ ನಾನೇನು ಪ್ರತಿಕ್ರಿಯೆ ನೀಡಲ್ಲ. ಇದು ಬಿಜೆಪಿವರು ಮಾಡಿದ ರಾಜಕೀಯ. ಹಿಂದೂ ಮುಸ್ಲಿಂ ಅಂತ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅವರು ಕೆಲಸದ ಆಧಾರದ ಮೇಲೆ ಮತ ಕೇಳಲ್ಲ. ಇಂತ ಗೊಂದಲ ಸೃಷ್ಟಿ ಮಾಡೋದೆ ಅವರ ಕೆಲಸ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರುತ್ತೆ ಅನ್ನೋ ವಿಶ್ವಾಸವಿದೆ. ರಾಮ ಮಂದಿರದ ತೀರ್ಪನ್ನ ಸ್ವಾಗತಿಸಿದ್ದೆವು ಇದನ್ನ ಹಾಗೆಯೇ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಪಕ್ಷ ಅಧಿಕಾರಕ್ಕೆ ತರೋ ದೃಷ್ಟಿಯಿಟ್ಟುಕೊಂಡು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ನಮ್ಮಲ್ಲಿ ಯಾವುದೇ ಒಡಕಿಲ್ಲ ಡಿಕೆಶಿ,ಸಿದ್ದರಾಮಯ್ಯ ಎಲ್ಲ ಒಗ್ಗಟ್ಟಾಗಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಮುಂದಿನ ಸಿಎಂ ಯಾರು ಅನ್ನೋದನ್ನ ಕೇವಲ ನಮ್ಮ ಅಭಿಪ್ರಾಯ ಹೇಳ್ತೀವಿ. ಆದ್ರೆ ಹೈಕಮಾಂಡ್ ಏನು ನಿರ್ಧಾರ ಮಾಡ್ತಾರೋ ಅದೇ ಫೈನಲ್ ಎಂದಿದ್ದಾರೆ..
Indian Railway: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ