ರಾಮನಗರ : ಕರ್ನಾಟಕದಲ್ಲಿ ಪ್ರಾದೇಶಿಕ ಸರ್ಕಾರ ತರಬೇಕು, ಕನ್ನಡಿಗರ ಸರ್ಕಾರ ತರಲಿಕ್ಕೆ ಹೊಸ ಮೈತ್ರಿಯನ್ನು ಚುನಾವಣೆಗೂ ಮುಂಚೆಯೇ ಮಾಡಲು ಸಿದ್ದತೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಹೇಳಿದ್ದಾರೆ…
ಇನ್ನೆರಡು ತಿಂಗಳಲ್ಲಿ ಇದರ ರೂಪುರೇಷೆಯ ಅರಿವು ನಿಮಗಾಗಲಿದೆ. 123 ಸ್ಥಾನ ಗೆಲ್ಲಲೇಬೇಕೆಂಬ ಛಲವಿದೆ, ಸವಾಲಿದೆ. ದೇವೇಗೌಡರ ಹೇಳಿಕೆ ಇವತ್ತಿನ ಪರಿಸ್ಥಿತಿ ಬಗ್ಗೆ ಇದೆ. ಇಂದಿನ ಸ್ಥಿತಿಯಲ್ಲಿ ಯಾರಿಗೂ ಬಹುಮತ ಬರವುದಿಲ್ಲ. ಇದು ರಾಜಕೀಯ ಪಂಡಿತರ ಲೆಕ್ಕಾಚಾರ ಈ ಹಿನ್ನೆಲೆಯಲ್ಲಿ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ..
ಇನ್ನೂ ಒಂದು ವರ್ಷ ಸಮಯವಿದ್ದು , ಏನು ಬೇಕಾದರೂ ಆಗಬಹುದು ಈಗ ಉತ್ತರ ಪ್ರದೇಶದಲ್ಲಿ ವಿರೋಧ ನೆಲಕಚ್ಚಿತ್ತು.. ಈಗ ಸಮಾಜವಾದಿ ಪಾರ್ಟಿ ಅಲ್ಲಿ ಪೈಪೋಟಿ ನಡೆಯುತ್ತಿದೆ ಸರಿಸಮನಾಗಿ ಪೈಪೋಟಿ ನೀಡುವ ವಾತಾವರಣ ಅಲ್ಲಿದೆ..
ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತಾರೆ. ಪ್ರಾದೇಶಿಕ ಹಿನ್ನೆಲೆ ಇರುವ ಕನ್ನಡಿಗರ ಸರ್ಕಾರ ತರುತ್ತಾರೆ. ಈ ನಾಡಿನ ಜನ ತರುತ್ತಾರೆ ಎಂಬ ವಿಶ್ವಾದ ನನಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳನ್ನ ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೇನೆ ಮುಂದೆ ಇದು ಎಲ್ಲಿಗೆ ಹೋಗುತ್ತದೋ ನೋಡಣ ಎಂದಿದ್ದಾರೆ…
ಅಲ್ಲದೇ ನನ್ನ ಬಗ್ಗೆ ಯಾರು ಚರ್ಚೆ ಮಾಡಲು ಸಾಧ್ಯವಿಲ್ಲ. ರಾಮನಗರದ ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಶಾಸಕ ಸ್ಥಾನ ದುರುಪಯೋಗ ಪಡಿಸಿಕೊಂಡಿಲ್ಲ. ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಿಲ್ಲ. ರಾಮನಗರದಲ್ಲಿ ಶಾಸಕನಾಗಿ ಯಾವ ರೀತಿ ಬದುಕು ನಡೆಸಿದ್ದೇನೋ ಹಾಗೆ ಇವತ್ತು ಸಹ ಬದುಕುತ್ತಿದ್ದೇನೆ. ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ನನಗೆ ಇಲ್ಲ ಎಂದಿದ್ದಾರೆ…