Karnataka Politics : ‘ಈಶ್ವರಪ್ಪ ಅಂತೆ ತಲೆ ಕೆಟ್ಟ ಈಶ್ವರಪ್ಪ’ : ಏಕವಚನದಲ್ಲಿ ಕಿಡಿಕಾರಿದ ಡಿಕೆಶಿ
ಗದಗ : ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಬದಲು ಕೇಸರಿ ಧ್ವಜ ಹಾರಿಸ್ತೀವಿ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಗದಗನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ..
ಈಶ್ವರಪ್ಪ ಅಂತೆ ತಲೆ ಕೆಟ್ಟ ಈಶ್ವರಪ್ಪ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ… ಇದೇ ವೇಳೆ ಆ ಬೊಮ್ಮಾಯಿ, ಗವರ್ನರ್ ಮಡಿಕೊಂಡು ಕೂತವರೆ. ಕಾಂಗ್ರೆಸ್ ಸರಕಾರ ಇದ್ದಿದ್ದರೆ ಹತ್ತು ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ವಿ..
ಕೆಂಪು ಕೋಟೆ ಮೇಲೆ ತ್ರಿವರ್ಣ ತೆಗೆದು ಕೇಸರಿ ಧ್ವಜ ಹಾರಿಸುವಂತ ಕಾಲ ನಿರ್ಮಾಣ ಆಗುತ್ತದೆ ಅಂತ ಹೇಳಿದ್ದಾನೆ. ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ. ಸಿಎಂ ಬೊಮ್ಮಾಯಿ ತುಟಿ ಪಿಟಿಕ್ ಅಂತಿಲ್ಲ.
ಬೊಮ್ಮಾಯಿ ಯಾವ ಮಾತನ್ನು ಆಡ್ತಿಲ್ಲ. ಬಾಯಿಗೆ ಹೊಲಿಗೆ ಹಾಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ಸಂವಿಧಾನ ಹೆಸರಲ್ಲಿ ಏನು ಪ್ರಮಾಣವಚನ ಸ್ವೀಕರಿಸಿದ್ದಾರೆ ಇವರು ಅಂತ ಪ್ರಶ್ನೆ ಪ್ರಶ್ನೆ ಮಾಡಿ . ಈ ಬಗ್ಗೆ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಮೇಲೆ ಕೇಸ್ ಹಾಕಬೇಕು ಎಂದಿದ್ದಾರೆ..