ಇಂದಿನಿಂದ ಪ್ರಾರಂಭವಾದ ವಿಧಾನಸಭಾ ಅಧಿವೇಶನ Saaksha Tv
ಬೆಂಗಳೂರು: ಸೋಮವಾರದಿಂದ ವಿಧಾನಸಭಾ ಜಂಟಿ ಅಧಿವೇಶನ ಪ್ರಾರಂಭವಾಗಿದೆ.
ಫೆಬ್ರವರಿ 14 ರಿಂದ 25ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಇಂದು ಬೆಳಿಗ್ಗೆ ಪ್ರಾರಂಭವಾದ ಅಧಿವೇಶನದಲ್ಲಿ ಸ್ಪೀಕರ್ ಅವರು ಶ್ರೀ ಇಬ್ರಾಹಿಂ ಸುತಾರ ಅವರಿಗೆ ಮತ್ತು ಭಾರತ ರತ್ನ ಡಾ. ಲತಾಮಂಗೇಶರ ಸಂತಾಪ ಸೂಚಿಸಿದ್ದಾರೆ.
ಮುಖ್ಯಂತ್ರಿಗಳು ತಮ್ಮ ಭಾಷಣವನ್ನು ಪ್ರಾರಂಭಿಸಿದ್ದಾರೆ. ಭಾಷಣದಲ್ಲಿ ದಿ. ಮಾಜಿ ಸಂಸದ ಹೆಚ್. ಬಿ. ಪಾಟೀಲ್ ಅವರನ್ನು ನೆನೆದರು. ಹಾಗೇ ಭಾರತ ರತ್ನ ಡಾ. ಲತಾಮಂಗೇಶ್ಕರ ಅವರನ್ನು ಸ್ವರಸ್ವತಿ ಎಂದು ಅವರಿಗೆ ನಮನ ಸಲ್ಲಿಸಿದರು. ಹಾಗೇ ದಿ. ಶ್ರೀ ಇಬ್ರಾಹಿಂ ಸುತಾವರಿಗೆ ಸಂತಾಪ ಸೂಚಿಸಿದರು.
ಇಂದಿನ ಅಧಿವೇಶನದಲ್ಲಿ ಕೇಸರಿ-ಹಿಜಾಬ್ ವಿವಾದ, ಬಿಟ್ ಕಾಯಿನ್, 40% ಕಮೀಷನ್ ಗಳ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಸದನದಲ್ಲಿ ಹಿಜಾಬ್- ಕೇಸರಿ ಸಂಘರ್ಷ ಕುರಿತು ಶಾಸಕ ಕೆ. ಎಸ್ ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆ ಬಗ್ಗೆಯೂ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆ ಇದೆ. ಹಾಗೇ ಮೇಕೆದಾಟು, ಮಹದಾಯಿ ಬಗ್ಗೆ ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಿದ್ದವಾಗಿವೆ.