Hijab controvercy : ಹಿಜಾಬ್ ಧರಿಸಿ ಬಂದಿದ್ದ 6 ವಿದ್ಯಾರ್ಥಿಗಳು ಪರೀಕ್ಷೆ ಬರೆಯದ ಬಗ್ಗೆ ಮಾಹಿತಿ ಪಡೆದ ಸಚಿವ ನಾರಾಯಣಗೌಡ
ಶಿವಮೊಗ್ಗದಲ್ಲಿ ಆರು ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯದ ಹಿನ್ನೆಲೆ, ಶಿವಮೊಗ್ಗ ಡಿಸಿಯಿಂದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ನಾರಯಣಗೌಡ ಅವರು ಮಾಹಿತಿ ಪಡೆದುಕೊಂಡಿದ್ದಾರೆ… ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ…
ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು.. ಆದ್ರೆ ಕೋರ್ಟ್ ಮಧ್ಯಂತರ ಆದೇಶವಿದೆ… ಮುಂದಿನ ಆದೇಶದ ವರೆಗೂ ಯಾವ ವಿದ್ಯಾರ್ಥಿಗಳೂ ಸಹ ಧಾರ್ಮಿಕ ಗುರುತುಗಳನ್ನ ಧರಿಸಬಾರದು ಎಂದು…
ಇದನ್ನೂ ಮೀರಿ ಕೆಲವರು ಹಿಜಾಬ್ ಧರಿಸಿದ್ದ ಹಿನ್ನೆಲೆ ಆ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆದು ಬರುವಂತೆ ತಿಳಿಸಿದರು ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಲ್ಲ… ಹೀಗಾಗಿ ಶಾಲೆ ಒಳಗೆ ಪ್ರವೇಶಕ್ಕೆ ಶಿಕ್ಷಕರು ನಿರಾಕರಿಸಿದ್ದು , ಆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ.. ಇದರ ಬಗ್ಗೆ ಈಗ ಸಚಿವ ನಾರಾಯಣ ಗೌಡ ಅವರು ಮಾಹಿತಿ ಪಡೆದುಕೊಂಡಿದ್ದಾರೆ.