ಮಳೆ ಹನಿಯೇ ಹಾಡಿನಲ್ಲಿ ಮುತ್ತಿನ ಮಳೆಗೆರೆದ ಮಾನ್ವಿತಾ – ಧೀರೆನ್…..
ಡಾ. ರಾಜ್ಕುಮಾರ್ ಮೊಮ್ಮಗ, ಪೂರ್ಣಿಮಾ ಮತ್ತು ರಾಮ್ಕುಮಾರ್ ಪುತ್ರ ಧೀರೇನ್ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ಶಿವ 143. ಸಿನಿಮಾದ ಹಾಡು ಪ್ರೇಮಿಗಳ ದಿನದ ಪ್ರಯುಕ್ತ ರಿಲೀಸ್ ಆಗಿದೆ.
ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಧೀರೇನ್ ರಾಮ್ಕುಮಾರ್ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರದ ಸಲುವಾಗಿ ವ್ಯಾಲೆಂಟೆನ್ಸ್ ಪ್ರಯುಕ್ತ. ರಿಲೀಸ್ ಮಾಡಲಾಗಿದೆ. ಪ್ರೇಮಿಗಳ ದಿನದಂದು ಈ ರಿಲೀಸ್ ಆಗಿರುವ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಧೀರೇನ್ ಮತ್ತು ಮಾನ್ವಿತಾ ಕಾಣಿಸಿಕೊಂಡಿದ್ದಾರೆ.
ಮಳೆ ಹನಿಯೇ ಎಂದು ಶುರುವಾಗುವ ಹಾಡಿನ ಸಾಹಿತ್ಯವನ್ನ ಕ್ರಾಂತಿ ಕುಮಾರ್ ಎಂಬುವವರು ಬರೆದಿದ್ದು ಅರ್ಜುನ್ ಜನ್ಯ ಟ್ಯೂನ್ ಕಂಪೋಸ್ ಮಾಡಿದ್ದಾರೆ. ನಿಹಾಲ್ ಮತ್ತು ಪೃಥ್ವಿ ಭಟ್ ಹಾಡಿಗೆ ಧ್ವನಿಯಾಗಿದ್ದಾರೆ.
ಶಿವ 143 ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಧೀರೇನ್ ರಾಮ್ಕುಮಾರ್ ಅವರಿಗೆ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದಲ್ಲೆ ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀರೋಗೆ ಅವರಿಗೆ ಮಾನ್ವಿತಾ ಕಾಮತ್ ಸಾಥ್ ನೀಡಿದ್ದಾರೆ.