Hijab controvercy : ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಮಕ್ಕಳಿಗೆ ಸಲಹೆ
ವಿಜಯಪುರ : ಹಿಜಾಬ್ ಕೇಸರಿ ಶಾಲು ವಿವಾದ ಹಿನ್ನೆಲೆ , ವಿಜಯಪುರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ… ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದ್ದಾರೆ.
ಅಂತೆಯೇ ವಿಜಯನಗರದ ದರ್ಬಾರ್ ಹೈಸ್ಕೂಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.. ವಿವಾದದಿಂದ ದೂರವಿದ್ದು ಶಿಕ್ಷಣದ ಕಡೆಗೆ ಮಹತ್ವ ಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ…
ಇದೇ ವೇಳೆ ಎಸ್ ಪಿ. ಡಿಸಿ , ಶಾಲಾ ಮಕ್ಕಳಿಗೆ ಬದುಕಿನ ಪಾಠ ಮಾಡಿದ್ದಾರೆ… ಎಸ್ ಪಿ ಆನಂದಕುಮಾರ್. ಡಿಸಿ ಸುನೀಲಕುಮಾರ್ ಅವರಿಂದ ವಿದ್ಯಾರ್ಥಿಗಳಿಗೆ ಮಹತ್ವದ ವಿಚಾರಗಳ ಬಗ್ಗೆ ತಿಳಿಸಿದ್ದಾರೆ.
ಜೀವನದಲ್ಲಿ ಮುಂದೆ ಬರಲು ಶಿಕ್ಷಣ ಪಡೆಯಬೇಕು. ಮುಂದೆ ಉತ್ತಮ ಭವಿಷ್ಯ ಇದೆ. ವಿವಾದಗಳಿಂದ ದೂರವಿದ್ದು ಶಿಕ್ಷಣ ಪಡೆಯಿರಿ. ಪರೀಕ್ಷೆ ಬಗ್ಗೆ ಗಮನ ಕೊಡಿ ಹೊರಗಡೆ ನಡೆಯುವ ವಿಷಯಗಳ ಬಗ್ಗೆ ಗಮನ ಹರಿಸಬೇಡಿ. ಉತ್ತಮ ಶಿಕ್ಷಣ ಪಡೆದು ನಮ್ಮ ಹಾಗೇ ದೊಡ್ಡ ಅಧಿಕಾರಿಗಳಾಗಿ ಎಂದು ಸಲಹೆ ನೀಡಿದ್ದಾರೆ…