Poltics : ನನಗೆ ರಾಜ್ಯ ಮುಖ್ಯ, ರಾಜ್ಯಕ್ಕೋಸ್ಕರ ತ್ಯಾಗ ಮಾಡ್ತಿದ್ದೇನೆ
ಹಾವೇರಿ : ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಡೋ ವಿಚಾರವಾಗಿ ಹಾವೇರಿ ಜಿಲ್ಲೆಯ ಹುಲಗೂರಿನಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ… ಸಿದ್ದರಾಮಯ್ಯನವರಿಗೆ ಅಂತಲ್ಲ ರಾಜ್ಯದ ಜನರಿಗಾಗಿ ಕ್ಷೇತ್ರ ಬಿಟ್ಟುಕೊಡ್ತಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಸಿದ್ದರಾಮಯ್ಯ ಸೇಫರ್ ಸೈಡ್ ಗಾಗಿ ಕ್ಷೇತ್ರ ಬಿಡ್ತಿದ್ದೇನೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಪರವಾದ ಒಲವಿದೆ. ಹೀಗಾಗಿ ರಾಜ್ಯದ ಜನರ ಸೇವೆಗಾಗಿ ಕ್ಷೇತ್ರ ಬಿಟ್ಟುಕೊಡ್ತಿದ್ದೇನೆ. ನನ್ನ ಕ್ಷೇತ್ರ ಆಮೇಲೆ ನೋಡಿಕೊಳ್ಳೋಣ. ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಂತಾ ಜನರು ಮಾತಾಡ್ತಿದ್ದಾರೆ.
ನನಗೆ ರಾಜ್ಯ ಮುಖ್ಯಾನೋ, ಎಂಎಲ್ಎ ಮುಖ್ಯಾನೋ. ನನಗೆ ರಾಜ್ಯ ಮುಖ್ಯ, ರಾಜ್ಯಕ್ಕೋಸ್ಕರ ತ್ಯಾಗ ಮಾಡ್ತಿದ್ದೇನೆ. ನನಗೆ ಯಾವ ಕ್ಷೇತ್ರಾನೂ ಬೇಡವೇ ಬೇಡ. ರಾಜ್ಯಕ್ಕೆ ಮತ್ತು ಸಿದ್ದರಾಮಯ್ಯಗೆ ಒಳ್ಳೆಯದಾದರೆ ಸಾಕು ಎಂದಿದ್ದಾರೆ…