RC15 ಶೂಟಿಂಗ್ ಗಾಗಿ ರಾಜಮಂಡ್ರಿ ತಲುಪಿದ ರಾಮ್ ಚರಣ್
ಶಂಕರ್ ನಿರ್ದೇಶನದ RC15 ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ರಾಮ್ ಚರಣ್ ಆಂಧ್ರಪ್ರದೇಶದ ರಾಜಮಂಡ್ರಿ ಏರ್ ಪೋರ್ಟ್ ತಲುಪಿದ್ದಾರೆ. ಎರ್ ಪೋರ್ಟ್ ನಿಂದ ಬಂದಿಳಿದ ತಕ್ಷಣ ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿ ಚರಣ್ ಅವರನ್ನು ಸುತ್ತುವರೆದಿದ್ದಾರೆ. ಹೋಟೆಲ್‌ಗೆ ತೆರಳುವ ಮಾರ್ಗದಲ್ಲಿ ರಾಮ್ ಚರಣ್ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತು ಸ್ವಾಗತ ಕೋರಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ.
ಫೆಬ್ರವರಿ 13 ರಂದು, ರಾಮ್ ಚರಣ್ ಮತ್ತು ಚಿತ್ರತಂಡ ಆರ್‌ಸಿ 15 ರ ಶೂಟಿಂಗ್‌ಗಾಗಿ ರಾಜಮಂಡ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಚರಣ್ ಅವರ ದರ್ಶನ ಪಡೆಯಲು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಗುಂಪುಟ್ಟಿದ್ದರು. ಹೋಟೆಲ್‌ಗೆ ತೆರಳುತ್ತಿದ್ದಾಗ, ಅವರ ಅಭಿಮಾನಿಗಳು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತು ಚರಣ್‌ಗೆ ಆತ್ಮೀಯ ಸ್ವಾಗತವನ್ನು ನೀಡಿದರು.
Sheer #RamCharan craze in Rajahmundry airport 🔥🔥
— Haricharan Pudipeddi (@pudiharicharan) February 14, 2022
RC15 ಪೊಲಿಟಿಕಲ್ ಡ್ರಾಮ ಸಿನಿಮಾವಾಗಿದ್ದು ಶಂಕರ್ ನಿರ್ದೇಶಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು RC15 ಕಥೆಯನ್ನು ಬರೆದಿದ್ದಾರೆ ಎಂದು ಬಹಿರಂಗಪಡಿಸಿದರು.
ರಾಮ್ ಚರಣ್ ಹೊರತಾಗಿ, RC15 ನಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ನಟಿಸಿದ್ದಾರೆ. ಎಸ್ ಥಮನ್ ಸಂಗೀತ ಸಿನಿಮಾಗಿದೆ.
Man Of Masses Arrived🤙🔥@AlwaysRamCharan #ManOfMassesRamCharan #RamCharan #RC15 pic.twitter.com/fmH0DD31Ws
— TeamRCMedak (@TeamRC_Medak) February 13, 2022