Pulwama Attack : ಪುಲ್ವಾಮಾ ದಾಳಿಗೆ 3 ವರ್ಷ , ಪುಲ್ವಾಮ ದಾಳಿ ಬಗ್ಗೆ ಮಾಹಿತಿ, ಪುಲ್ವಾಮಾ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ…???
ದೇಶವೇ ಕಣ್ಣೀರು ಇಟ್ಟಿದ್ದ , ನಮ್ಮ ಹೆಮ್ಮೆಯ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದ ,, ಭಾರತದ ಪಾಲಿನ ಕರಾಳ ದಿನ ಪುಲ್ವಾಮ ದಾಳಿ ನಡೆದು ಇಂದಿಗೆ 3 ವರ್ಷಗಳು ಕಳೆದಿದೆ…
2019 ರಲ್ಲಿ ಪುಲ್ವಾಮಾದಲ್ಲಿ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ( ಕರ್ನಾಟಕದವರನ್ನೂ ಒಳಗೊಂಡಂತೆ ) ಸಿಬ್ಬಂದಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಶೌರ್ಯ ಮತ್ತು ಸರ್ವೋಚ್ಚ ತ್ಯಾಗವು ಪ್ರತಿ ಭಾರತೀಯರನ್ನು ಬಲಿಷ್ಠವಾಗಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಪುಲ್ವಾಮಾದಲ್ಲಿ ದಾಳಿಯ ಹಿನ್ನೆಲೆ
ಪುಲ್ವಾಮಾದ ಅವಂತಿಪೋರಾದ ಲಾಟೂಮೊಡ್ ನಲ್ಲಿ, ಸ್ಫೋಟಕ ತುಂಬಿದ ವಾಹನವು ಬೈಲೇನ್‌ನಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಪ್ರವೇಶಿಸಿ ಬೆಂಗಾವಲು ಪಡೆಯಲ್ಲಿ ಐದನೇ ಬಸ್ ಗೆ ಡಿಕ್ಕಿ ಹೊಡೆದ ನಂತರ ಸ್ಫೋಟ ಸಂಭವಿಸಿತ್ತು. ಆರನೇ ಬಸ್ ಕೂಡ ಸ್ಫೋಟದ ಪ್ರಭಾವಕ್ಕೆ ಒಳಗಾಗಿತ್ತು. ಘಟನೆಯಲ್ಲಿ ಸುಮಾರು 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು..
2,547 ಯೋಧರನ್ನು ಸಾಗಿಸುವ 78 ವಾಹನಗಳ ಬೆಂಗಾವಲು 3:30 ಕ್ಕೆ ಜಮ್ಮು ಟ್ರಾನ್ಸಿಟ್ ಕ್ಯಾಂಪ್‌ನಿಂದ ಹೊರಟಿತ್ತು. ಯೋಧರು ನಿಯೋಜಿತ ಪ್ರದೇಶಗಳಿಂದ ಹಿಂತಿರುಗುತ್ತಿದ್ದರು.. ಅದೇ ಸಮಯಕ್ಕೆ ಈ ದುರ್ಘಟನೆ ನಡೆದುಹೋಗಿತ್ತು..
ಪುಲ್ವಾಮಾ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ…???
ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಇಡೀ ದೇಶದ ಜನರು ಆಕ್ರೋಶಒಗೊಂಡಿದ್ದಾಗಲೇ ಸೇಡು ತೀರಿಸಿಕೊಳ್ಳುವ ಶಪತ ಮಾಡಿದ್ದ ಪ್ರಧಾನಿ ಮೋದಿ ಅವರು ಭದ್ರತಾ ಪಡೆಗಳಿಗೆ ಎಲ್ಲಾ ರೀತಿಯ ಸ್ವಾತಂತ್ರ ನೀಡಿದ್ದರು… ಭಯೋತ್ಪಾದಕ ದಾಳಿಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದವು.
ದಾಳಿಯ ಹನ್ನೆರಡು ದಿನಗಳ ನಂತರ, ಫೆಬ್ರವರಿ 26 ರ ಮುಂಜಾನೆ, ಭಾರತೀಯ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಬಾಲಾಕೋಟ್ ಗೆ ನುಗ್ಗಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ನೂರಾರು ಉಗ್ರರನ್ನ ಅಲ್ಲೇ ಫಿನಿಷ್ ಮಾಡಲಾಗಿತ್ತು..
2019 ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 40 ಯೋಧರ ಬಲಿದಾನಕ್ಕೆ ಭಾರತವು ಪ್ರತೀಕಾರ ತೆಗೆದುಕೊಂಡಿತ್ತು.. ಇಡೀ ವಿಶ್ವ ಭಾರತದತ್ತ ತಿರುಗಿ ನೋಡಿತ್ತು… ಬಂಡ ಪಾಕಿಸ್ತಾನ ನಮ್ಮಲ್ಲಿ ಯಾವುದೇ ಉಗ್ರರೂ ಸತ್ತೇ ಇಲ್ಲ ಎಂದು ವಾದ ಮಾಡಿದ್ದರು.. ಮಾಡುತ್ತಲೇ ಬಂದಿದ್ದಾರೆ…
ಆತ್ಮಾಹುತಿ ದಾಳಿಯ ಕಿಂಗ್ ಪಿನ್ ಆಗಿದ್ದ ಉಗ್ರ ಅಜರ್ ಸೇರಿದಂತೆ 19 ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಆಗಸ್ಟ್ 2020 ರಲ್ಲಿ ವಿಶೇಷ ನ್ಯಾಯಾಲಯದಲ್ಲಿ 13,500 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತು. .
ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಭಯೋತ್ಪಾದಕರು ಮತ್ತು ಅವರ ಸಹಯೊಗಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಮತ್ತು ಹೇಳಿಕೆಗಳನ್ನು ಒಟ್ಟುಗೂಡಿಸಿ “ಕುರುಡು ಪ್ರಕರಣ” ವನ್ನು ಎನ್‌ಐಎ ಪರಿಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.