CSKಗೆ ರೈನಾ ಬೇಡವಾಗಿದ್ದು ಯಾಕೆ..? ಇಲ್ಲಿದೆ ಉತ್ತರ
ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ ಬೆಸ್ಟ್ ಅನ್ನಿಸಿಕೊಂಡವರು ಕೂಡ ಕನಿಷ್ಠ ಬೆಲೆಗೂ ಮಾರಾಟವಾಗಲಿಲ್ಲ. ಅದರಲ್ಲಿ ಮುಖ್ಯವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾ ಸೇಲ್ ಆಗದೇ ಇರೋದು ಕ್ರೀಡಾಭಿಮಾನಿಗಳಲ್ಲಿ ಮತ್ತು ವಿಶೇಷವಾಗಿ ಸಿಎಸ್ ಕೆ ಅಭಿಮಾನಿಗಳಲ್ಲಿ ಭಾರಿ ಆಶ್ಚರ್ಯವನ್ನುಂಟು ಮಾಡಿದೆ. ipl-2022-csk-ceo suresh raina saaksha tv
ಮಿಸ್ಟರ್ ಐಪಿಎಲ್ ಅಂತಾನೇ ಕರೆಸಿಕೊಳ್ಳುವ ರೈನಾಗೆ ಈ ಬಾರಿ ಯಾರೂ ಮಣೆ ಹಾಕಿಲ್ಲ ಯಾಕೆ.. ಸಿಎಸ್ ಕೆ ತಂಡದ ಚಿನ್ನ ತಲಾ ಅಂತ ಫೇಮ್ ಪಡೆದುಕೊಂಡಿದ್ದರೂ ಚೆನ್ನೈ ತಂಡ ಅವರನ್ನ ಖರೀದಿಸಲಿಲ್ಲ ಯಾಕೆ ಅನ್ನೋ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿದೆ.
ಚೆನ್ನೈ ಫ್ರಾಂಚೈಸಿ ಮತ್ತು ಸುರೇಶ್ ರೈನಾ ನಡುವೆ ಮುಸುಕಿ ಗುದ್ದಾಟ ಇದೆ ಅನ್ನೋ ಮಾತುಗಳು ಕೂಡ ಇದೆ. ಈ ಮಧ್ಯೆ ಈ ಎಲ್ಲದ್ದಕ್ಕೂ ಫುಲ್ ಸ್ಟಾಪ್ ಇಡುತ್ತಾ ಚೈನ್ನೈ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥ್ ರೈನಾ ಸೇಲ್ ಆಗದೇ ಇರುವುದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.
‘ಸುರೇಶ್ ರೈನಾ ಹನ್ನೆರಡು ವರ್ಷಗಳಿಂದ ಐಪಿಎಲ್ನಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಆದ್ರೆ ಪ್ರತಿ ಆಟಗಾರನನ್ನು ಫಾರ್ಮ್ ಆಧಾರದ ಮೇಲೆ ತಂಡಕ್ಕೆ ನೇಮಕ ಮಾಡಲಾಗುತ್ತದೆ. ಆತನನ್ನು ಖರೀದಿಸುವುದು ನಮಗೆ ತುಂಬಾ ಕಷ್ಟಕರವಾದ ವಿಷಯ. ನಮ್ಮ ಟೀಂಗೆ ರೈನಾ ಫಿಟ್ ಆಗಿಲ್ಲ ಎಂದಿದ್ದಾರೆ. ಅಲ್ಲದೇ ಸುರೇಶ್ ರೈನಾ ಅವರನ್ನ ಮಿಸ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಗೆ ಸುರೇಶ್ ರೈನಾ ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದೆ.