Boycott_ChennaiSuperKings , ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ Saaksha Tv
ಚನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಎಸ್ಕೆಲ ವಿರುದ್ಧ #Boycott_ChennaiSuperKings ಎಂಬ ಅಭಿಯಾನ ಆರಂಭವಾಗಿದೆ.
IPL ನಲ್ಲಿ ನಾಲ್ಕು ಬಾರಿ IPL ಟ್ರೋಫಿ ಎತ್ತಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣರನ್ನು ಖರೀದಿಸಿದೆ. ಇದನ್ನು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.
ಮಹೇಶ್ ತೀಕ್ಷಣ ಸಿಂಹಳೀಯ ಬೌಲರ್ ಎಂಬುದು. 2009ರಲ್ಲಿ ಎಲ್ಟಿಕಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದರು. ಇದರಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ವೈಮನಸ್ಸಿದೆ.
ಇದೀಗ ತಮಿಳುನಾಡು ಮೂಲದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಂಹಳೀಯ ಬೌಲರ್ ಸೇರ್ಪಡೆ ಆಗಿರುವುದನ್ನು ಅಭಿಮಾನಿಗಳು ವಿರೋಧಿಸಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್ಗಳು ವೈರಲ್ ಆಗ ತೊಡಗಿದೆ.