ನಾನು ಸತ್ಯವನ್ನೆ ಹೇಳುತ್ತೇನೆ, ಸುಳ್ಳು ಭರವಸೆ ನೀಡುವುದಿಲ್ಲ. – ರಾಹುಲ್ ಗಾಂಧಿ
ನಾನು ಸತ್ಯವನ್ನೆ ಹೇಳುತ್ತೇನೆ ಸುಳ್ಳು ಭರವಸೆ ನಿಡುವುದಿಲ್ಲ . ಸುಳ್ಳು ಭರವಸೆ ಕೇಳ ಬಯಸಿದರೆ ಅದನ್ನ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅಕಾಲಿ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರ ಭಾಷಣಗಳಲ್ಲಿ ಕಳಬೇಕು ಎಂದು ಕಾಂಗ್ರೇಸ್ ನಾಯಕ ರಾಹುಲ್ ಗಾಂದಿ ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಟಿಯಾಲ ಜಿಲ್ಲೆಯ ರಾಜಪುರದಲ್ಲಿ ‘ನವಿ ಸೋಚ್ ನವ ಪಂಜಾಬ್’ ಎಂಬ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು, “ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನೀವು (ಸಾರ್ವಜನಿಕರು) ಸುಳ್ಳು ಭರವಸೆಗಳನ್ನು ನೀಡುವುದನ್ನು ಕೇಳಲು ಬಯಸಿದರೆ, ಮೋದಿ ಜೀ, ಬಾದಲ್ ಜಿ ಮತ್ತು ಕೇಜ್ರಿವಾಲ್ ಜಿಯವರ ಮಾತುಗಳನ್ನು ಕೇಳಿ. ಸತ್ಯವನ್ನು ಮಾತ್ರ ಹೇಳಲು ನನಗೆ ಕಲಿಸಲಾಗಿದೆ. ” ಎಂದರು.
ಪಂಜಾಬ್ ಅಪಾಯದಿಂದ ಹೊರಗುಳಿಯುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು ಎಂದು ಕಾಂಗ್ರೇಸ್ ನಾಯಕ ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ “ಪ್ರಯೋಗ” ಕ್ಕೆ ಹೋಗದಂತೆ ಪಂಜಾಬ್‌ನ ಮತದಾರರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು, ಗಡಿ ರಾಜ್ಯಕ್ಕೆ ಶಾಂತಿಯನ್ನು ಕಾಪಾಡುವುದು ಅತ್ಯಂತ ಮುಖ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅದು ಸಾದ್ಯ ಎಂದು ಹೇಳಿದರು.