Rohit sharma | ಕೊಹ್ಲಿ ಬಗ್ಗೆ ಕೇಳಿದ್ದಕ್ಕೆ ಮೀಡಿಯಾ ಮೇಲೆ ಉರಿದು ಬಿದ್ದ ಹಿಟ್ ಮ್ಯಾನ್
“ನಾನು ನಿಮ್ಮೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ … ನೀವು ಸ್ವಲ್ಪ ಸುಮ್ಮನಿರುತ್ತೀರಾ?” ವಿರಾಟ್ ಕೊಹ್ಲಿ ಚೆನ್ನಾಗಿದ್ದಾರೆ.
ಅವರು ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ. ಅವರು ಕಳೆದ ಒಂದು ದಶಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀರ್ಘಕಾಲ ಆಡುತ್ತಿರುವ ವ್ಯಕ್ತಿಗೆ ಒತ್ತಡವನ್ನು ಹೇಗೆ ಜಯಿಸಬೇಕು ಎಂದು ತಿಳಿದಿದೆ.
ಕಠಿಣ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ವಿರಾಟ್ ಗೆ ತಿಳಿದಿದೆ ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಪರ ಟೀಂ ಇಂಡಿಯಾ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದಾರೆ.
ವಾಸ್ತವವಾಗಿ ಇದೆಲ್ಲಾ ನಿಮ್ಮಿಂದ ಪ್ರಾರಂಭವಾಗಿದ್ದು. ನೀವು ಸುಮ್ಮನಿದ್ದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಮಾಧ್ಯಮಗಳ ಮೇಲೆ ರೋಹಿತ್ ಶರ್ಮಾ ಫೈರ್ ಆಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ. ಹೀಗಾಗಿ ವಿರಾಟ್ ಬಗ್ಗೆ ಟೀಕೆಗಳು ಬರುತ್ತಿವೆ.
ಈ ವಿಚಾರವಾಗಿ ಮಾಧ್ಯಮಗಳು ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸಿದ್ದು, ಹಿಟ್ ಮ್ಯಾನ್ ಸುದ್ದಿಗಾರರ ಮೇಲೆಯೇ ಫೈರ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಅವರು ಸಂಪೂರ್ಣ ಆತ್ಮವಿಶ್ವಾಸದಿಂದ ಇದ್ದಾರೆ. ಅವರ ಫಾರ್ಮ್ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ರೋಹಿತ್. Rohit Press conference Talk on Kohli saaksha tv








