ಡಿ ಬಾಸ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕ್ರಾಂತಿ ಟೀಸರ್ ಗಿಫ್ಟ್….
ಡಿ ಬಾಸ್ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 45 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಗ್ರಾಂಡ್ ಆಗಿ ಸೆಲಬ್ರೇಟ್ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ದರ್ಶನ್ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿಲ್ಲ. ಆ ಬಾರಿಯೂ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನಲೆಯಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಆಭಿಮಾನಿಗಳಿ ಬೇಸರಿಸಿಕೊಳ್ಳಬಾರದು ಎಂದು ಕ್ರಾಂತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ.
ಮ್ಯೂಸಿಕ್ ಡೈರೆಕಕ್ಟರ್ ವಿ ಹರಿಕೃಷ್ಣ ನ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಕ್ರಾಂತಿ. ಸಮಾಜಕ್ಕೆ ಸಂದೇಶ ಕೊಡುವ ಜೊತೆಗೆ ಮಾಸ್ ಎಲಿಮೆಂಟಗಳು ಈ ಚಿತ್ರದಲ್ಲಿರಲಿವೆ. ದರ್ಶನ್ ಹುಟ್ಟು ಹಬ್ಬದಂದೆ ಕ್ರಾಂತಿ ಮಾಸ್ ಲಿಕ್ ಅಂಡ್ ಡೈಲಾಗ್ ರಿವೀಲ್ ಆಗಿದೆ. kranthi darshan movie first look teaser out
“ನನ್ನ ಶಾಲೆ. ಅಕ್ಷರ ಎದೆಗೆ ಬಿತ್ತಿದ ಶಾಲೆ. ಪ್ರಜ್ಞೆಯ ತಲೆಗೆ ನೂಕಿದ ಶಾಲೆ. ಬದುಕುವ ದಾರಿ ತೋರಿದ ಶಾಲೆ. ಎಲ್ಲರನ್ನೂ ಪ್ರೀತಿಸುವುದ ಕಲಿಸಿದ ಶಾಲೆ. ತಾಯಿ ನುಡಿ ದೇವ ನುಡಿ ಎಂದ ಶಾಲೆ. ಈ ತಾಯಿಗೆ ನನ್ನ ಕನ್ನಡ ತಾಯಿಗೆ, ನಾನು ಚಿರಋಣಿ.” ಎಂದು ಫಸ್ಟ್ ಲುಕ್ ನಲ್ಲಿ ದರ್ಶನ್ ಡೈಲಾಗ್ ಹೊಡೆದಿದ್ದಾರೆ. ಕೊನೆಯಲ್ಲಿ ಬೈಕ್ ಹಿಡಿದು ಬರುವ ದೃಶ್ಯ ಮಾಸ್ ಪ್ರಿಯರಿಗೆ ಇಷ್ಟವಾಗುವಂತಿದೆ.
ವಿ ಹರಿಕೃಷ್ಣ ಇದೆ ಮೊದಲ ಭಾರಿಗೆ ಪ್ಯಾನ್ ಇಂಡಿಯ ಮಟ್ಟದಲ್ಲಿ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಹಳ ದಿನಗಳ ಬಳಿಕ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಇಬ್ಬರೂ ಅದ್ದೂರಿಯಾಗಿ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.