ಇದಕ್ಕಿದ್ದ ಹಾಗೇ ಆಕಾಶದಿಂದ ನೆಲಕ್ಕೆ ಬಿದ್ದ ನೂರಾರು ಪಕ್ಷಿಗಳು Saaksha Tv
ಮೆಕ್ಸಿಕೊ: ಇದಕ್ಕಿದ್ದ ಹಾಗೇ ನೂರಾರು ಪಕ್ಷಿಗಳು ಆಕಾಶದಿಂದ ನೆಲಕ್ಕೆ ಬಿದ್ದ ಘಟನೆ ಮೆಕ್ಸಿಕನ್ ನಗರದಲ್ಲಿ ನಡೆದಿದೆ.
ಫೆ.7ರಂದು ಹಳದಿ ಬಣ್ಣದ ತಲೆಯುಳ್ಳ ಕಪ್ಪು ಹಕ್ಕಿಗಳ ಹಿಂಡು ಒಂದೇ ಸಲಕ್ಕೆ ನೆಲಕ್ಕೆ ಬಿದ್ದಿವೆ. ಇದರ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಪಕ್ಷಿಗಳು ಮೃತಪಟ್ಟು ಬಿದ್ದಿರುವುದು ಕಾಣಸಿಗುತ್ತಿದ್ದವು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ 100ಕ್ಕೂ ಹೆಚ್ಚು ಪಕ್ಷಿಗಳ ಮೃತದೇಹ ದೊರಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸದ್ಯ ನೂರಾರು ಹಕ್ಕಿಗಳು ಒಮ್ಮೆಲೆ ಬೀಳುವ ಭಯಾನಕ ವಿಡಿಯೋ ವೈರಲ್ ಆಗಿದೆ. ಪಕ್ಷಿಗಳ ಹಿಂಡು ಒಂದೇ ಸಲಕ್ಕೆ ಭೂಮಿಗೆ ಬಿದ್ದ ಪರಿಣಾಮ ಹಲವಾರು ಹಕ್ಕಿಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಈ ಘಟನೆಗೆ 5ಜಿ ತಂತ್ರಜ್ಞಾನವೇ ಈ ರೀತಿ ಪಕ್ಷಿಗಳ ಮಾರಣಹೋಮ ನಡೆಯಲು ಕಾರಣ ಎಂದು ಹಲವರು ದೂರಿದ್ದಾರೆ.ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಜ್ಞಾನಿಗಳು ಪಕ್ಷಿಗಳ ಸಾವಿಗೆ ಕಾರಣ ಹುಡುಕುತ್ತಿದ್ದಾರೆ. ಈ ಕುರಿತು ಖಾಸಗಿ ಸುದ್ದಿ ಸಂಸ್ಥೆ ವಿಡಿಯೋವನ್ನು ಹಂಚಿಕೊಂಡಿದೆ.
ಈ ಕುರಿತು ಮೆಕ್ಸಿಕೋದ ಪರಿಸರಶಾಸ್ತ್ರಜ್ಞ ಡಾ. ರಿಚರ್ಡ್ ಮಾತನಾಡಿ, ಗಿಡುಗದಂತಹ ದೈತ್ಯ ಪಕ್ಷಿ ಈ ಹಕ್ಕಿಗಳ ಹಿಂಡನ್ನು ಅಟ್ಟಿಸಿಕೊಂಡು ಬಂದ ಕಾರಣ ಈ ರೀತಿ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.








