Karnataka | ಕಾಂಗ್ರೆಸ್ ಸದನದ ಗೌರವ ಹಾಳು ಮಾಡಿದೆ : ಬಿಜೆಪಿ karnataka-congress leaders protest in assembly
ಬೆಂಗಳೂರು : ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ ಎಂದು ರಾಜ್ಯ ಬಿಜೆಪಿ ಘಟಕ ಟೀಕೆ ಮಾಡಿದೆ.
ಕಾಂಗ್ರೆಸ್ ನಾಯಕರು ತಿಂರಗಾವನ್ನು ಹಿಡಿದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ಕಾಂಗ್ರೆಸ್ ವಿರುದ್ಧದ ಕಿಡಿಕಾರಿರುವ ಬಿಜೆಪಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ತನ್ನದೇ ಆದ ಸ್ಥಾನವಿದೆ.
ಆದರೆ ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ. ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ. ಇದು ಕ್ಷಮಿಸಲನರ್ಹ.
ಕಾಂಗ್ರೆಸ್ಸಿಗರೇ, ಮತದಾರರು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದು ಜನರ ಸಂಕಷ್ಟಗಳಿಗೆ ಧ್ವನಿಯಾಗಿ, ಸಮಸ್ಯೆ ಬಗೆಹರಿಸಿ ಎಂದು, ತ್ರಿವರ್ಣಕ್ಕೆ ಅವಮಾನ ಮಾಡಲು ಅಲ್ಲ. ಜನರ ತೆರಿಗೆ ಹಣದಲ್ಲಿ ನಡೆಸುವ ಕಲಾಪವನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವುದು ವಿಷಾದನೀಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ತನ್ನದೇ ಆದ ಸ್ಥಾನವಿದೆ.
ಆದರೆ ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತು ಸದನದ ಗೌರವವನ್ನು ಹಾಳು ಮಾಡಿದೆ.
ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ.
ಇದು ಕ್ಷಮಿಸಲನರ್ಹ.#ದೇಶದ್ರೋಹಿಕಾಂಗ್ರೆಸ್
— BJP Karnataka (@BJP4Karnataka) February 17, 2022
ಧ್ವಜ ಸಂಹಿತೆಯ ಬಗ್ಗೆ ಮಾತನಾಡುವ ಬುರುಡೆರಾಮಯ್ಯ ಅವರೇ, ನಿಮ್ಮ ಪಕ್ಷದ ಶಾಸಕರು ಧ್ವಜವನ್ನು ದುರ್ಬಳಕೆ ಮಾಡುತ್ತಿದ್ದಾಗ ಕೈ ಕಟ್ಟಿ ಕುಳಿತಿದ್ದೇಕೆ? ಕಾಂಗ್ರೆಸ್ ಪಕ್ಷದ ಈ ದುರ್ವತನೆಗೆ ನೀವು ಪ್ರೇರಕರೋ, ಮೂಕ ಪ್ರೇಕ್ಷಕರೋ?
ತನ್ನ ರಾಜಕೀಯ ಬೇಳೆ ಬೇಯಿಸಲು ಸದನದ ಹೊರಗೆ ಹಿಜಾಬ್ ವಿಷಯವನ್ನು ಎತ್ತಿಕೊಂಡ ಕಾಂಗ್ರೆಸ್ ಪಕ್ಷ ಏನೂ ಅರಿಯದ ಮಕ್ಕಳಲ್ಲಿ ವಿಷ ಬೀಜ ಬಿತ್ತಿತು.
ಈಗ ಸದನದೊಳಗೆ ರಾಷ್ಟ್ರ ಧ್ವಜವನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸಿ, ತಿರಂಗಕ್ಕೆ ಅವಮಾನ ಮಾಡಿದೆ. ನಾಡಿನ ಜನರು ನಿಮ್ಮನ್ನು ಕ್ಷಮಿಸುವರೇ ಎಂದು ಪ್ರಶ್ನಿಸಿದೆ.c








