duniya vijay | ಮತ್ತೆ ನಿರ್ದೇಶನದತ್ತ ದುನಿಯಾ ವಿಜಯ್..!!
ಸಲಗ ಸಿನಿಮಾದ ಬಳಿಕ ನಟ ದುನಿಯಾ ವಿಜಯ್ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.
ಸಲಗ ಸಿನಿಮಾದಂತೆ ರಾ ಆಗಿರುವಂತಹ ಕಥೆಯನ್ನೇ ಸಿನಿಮಾ ಮಾಡಲಿದ್ದಾರಂತೆ.
ಅಂದು ಕೊಂಡಂತೆ ಆದ್ರೆ ದುನಿಯಾ ವಿಜಿ ಸಿನಿಮಾ ಶಿವರಾತ್ರಿ ಹೊತ್ತಿಗೆ ಮುಹೂರ್ತ ನಡೆಯಲಿದೆಯಂತೆ.
ದುನಿಯಾ ವಿಜಯ್ ಸಲಗ ಸಿನಿಮಾ ನಿರ್ದೇಶನಕ್ಕೆ ಇಳಿದಾಗ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.
ಆದ್ರೆ ಯಾರೂ ಊಹಿಸದ ರೀತಿಯಲ್ಲಿ ಸಲಗ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಕಮಾಲ್ ಮಾಡಿತ್ತು.
ದುನಿಯಾ ವಿಜಯ್, ನಿರ್ದೇಶಕರಾಗಿ, ನಾಯಕನಟರಾಗಿ ಆ ಸಿನಿಮಾದಲ್ಲಿ ಗೆದ್ದಿದ್ದರು.
ಇದಾದ ಬಳಿಕ ವಿಜಿ ಟಾಲಿವುಡ್ ನಲ್ಲಿ ಬಾಲಯ್ಯ ವಿರುದ್ಧ ವಿಲನ್ ಆಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.
ಇದು ಫಿಕ್ಸ್ ಕೂಡ ಆಗಿದೆ. ಈ ಮಧ್ಯೆ ವಿಜಯ್ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರಂತೆ.









