Priyanka Gandhi | ಮೋದಿ-ಕೇಜ್ರಿವಾಲ್ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ priyanka-gandhi-punjab-polls narendra modi saaksha tv
ಪಠಾಣ್‌ಕೋಟ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ ಕೇಜ್ರಿವಾಲ್ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವ್ಯಂಗ್ಯವಾಡಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪಂಜಾಬ್ ಪಠಾಣ್ ಕೋಟ್ ನಲ್ಲಿ ಚುನಾವಣೆ ಪ್ರಚಾರ ನಡೆಸಿದರು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದರು.
ಈ ಎರಡು ಪಕ್ಷಗಳೂ ಆರ್ ಎಸ್ ಎಸ್ ನಿಂದ ಹೊರ ಹೊಮ್ಮಿವೆ. ಮೋದಿ-ಕೇಜ್ರಿವಾಲ್ ಇಬ್ಬರೂ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ ಎಂದು ವ್ಯಂಗ್ಯವಾಡಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಆಪ್ ಪಕ್ಷವನ್ನು ಕಾಂಗ್ರೆಸ್ ನ ಕಾಪಿ ಎಂದು ಟೀಕಿಸಿದರು. ಅಲ್ಲದೇ ಈ ಎರಡೂ ಪಕ್ಷಗಳು ಭ್ರಷ್ಟಾಚಾರದ ಪಾಲುದಾರರು. ಪಂಜಾಬ್ ಲೂಟಿ ಮಾಡುತ್ತಿದ್ದರೇ ಮತ್ತೊಬ್ಬರು ದೆಹಲಿಯಲ್ಲಿ ಲೂಟಿ ಆರಂಭಿಸಿದ್ದಾರೆ ಎಂದು ಕೆಂಡಕಾರಿದರು.









