ಒಂದೇ ಊರಿನಲ್ಲಿ 7-8 ಮೈನಾ ಹಕ್ಕಿಗಳ ಸಾವು Saaksha Tv
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಯಪ್ಪನಹಳ್ಳಿಯಲ್ಲಿ ಸುಮಾರು ಮೂರು ನಾಲ್ಕು ಕಡೆ ಏಳೆಂಟು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ.
ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಪ್ಪನಹಳ್ಳಿ ಸಮೀಪದಲ್ಲಿ ಯಾವುದೇ ವಿದ್ಯತ್ ತಂತಿಗಳಿಲ್ಲ, ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳಾಗಲೀ ಇಲ್ಲ. ಆದರೂ ಹಕ್ಕಿಗಳು ಸಾವನ್ನಪ್ಪಿರುವ ಕುರಿತು ನಿಖರ ಕಾರಣ ತಿಳಿದು ಬಂದಿಲ್ಲ.
ಈ ಕುರಿತು ಮಾತನಾಡಿರುವ ಗ್ರಾಮದ ಸತೀಶರೆಡ್ಡಿ ಅವರು ಈ ಹಕ್ಕಿಗಳು ಸತ್ತಿರುವುದನ್ನು ಕಂಡು ಒಂದೆರಡು ಕಡೆ ನಾನೇ ಮಣ್ಣುಚ್ಚಿದ್ದೇನೆ. ಕಳೆದೆರಡು ತಿಂಗಳಿನಿಂದ ಈ ಭಾಗದಲ್ಲಿ ಶೇ 80 ರಷ್ಟು ಕಾಗೇಗಳು ಕಣ್ಮರಾಯಾಗಿವೆ ಎಂಬ ಆತಂಕದ ಸಂಗತಿಯನ್ನು ತಿಳಸಿದ್ದಾರೆ.
ಈ ಬಗ್ಗೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಮಾತನಾಡಿ ಹಕ್ಕಿಗಳು ಮೃತಪಟ್ಟಿರುವ ಚಿತ್ರಗಳನ್ನು ಗಮನಿಸಿದಾಗ ಅವು ತೋಟಗಳ ಪಕ್ಕದಲ್ಲಿ ಸತ್ತಿವೆ. ಬಹುಶಃ ಕೀಟನಾಶಕಗಳ ಸೇವನೆಯಿಂದ ಸತ್ತಿರಬಹುದು. ಅಲ್ಲದೇ ವೈರಲ್ ಇನ್ ಫ್ಲುಯೆನ್ಜಾ ಖಾಯಿಲೆಯಿಂದಲೂ ಸತ್ತಿರಬಹುದು. ಈ ವೈರಲ್ ಖಾಯಿಲೆ ಮನುಷ್ಯರಿಗೆ ಹರಡುವುದಿಲ್ಲ. ಈ ಕುರಿತು ಹೆಬ್ಬಾಳದ ಬಳಿ ಇರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ನಾಳೆ ಮೂರು ಮೃತಪಟ್ಟಿರುವ ಹಕ್ಕಿಗಳನ್ನು ಕಳಸಿ ಅಲ್ಲಿಂದ ವರದಿಯನ್ನು ಪಡೆಯಲಾಗುವುದು ಎಂದರು.








