ಪಂಜಾಬ್ ಚುನಾವಣಾ ಪ್ರಚಾರ ಮುಕ್ತಾಯ – 20ಕ್ಕೆ ಚುನಾವಣೆ.
ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಚುನಾವಣೆ ಪ್ರಚಾರಕ್ಕೆ ಇಂದು ಕೊನೆಯ ದಿನ. ಕೊನೆಯ ದಿನದ ಪ್ರಯುಕ್ತ ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಬೆಂಬಲ ಪಡೆಯಲು ಕೊನೆಯ ಕಸರತ್ತು ನಡೆಸುತ್ತಿವೆ.
ಸ್ಟಾರ್ ಪ್ರಚಾರಕರು ಮತ್ತು ಮತದಾರರಲ್ಲದವರು ಇಂದು ಸಂಜೆ 6 ಗಂಟೆಯೊಳಗೆ ಕ್ಷೇತ್ರದಿಂದ ಹೊರಹೋಗುವಂತೆ ಚುನಾವಣಾ ಆಯೋಗ ತಿಳಿಸಿದೆ.
ಎಲ್ಲಾ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ಸಂಜೆ 6 ಗಂಟೆಗೆ ಕೊನೆಗೊಂಡಿವೆ ಎಂದು ಆಯೋಗ ಹೇಳಿದೆ, ಆದರೂ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆ ಮನೆಗೆ ಪ್ರಚಾರಕ್ಕೆ ಹೋಗಬಹುದು.
ಪಂಜಾಬ್ ಪೊಲೀಸರು ಮತ್ತು ಕೇಂದ್ರೀಯ ಅರೆಸೇನಾ ಪಡೆ ಸಿಬ್ಬಂದಿಗಳು ಹೋಟೆಲ್‌ಗಳು, ಲಾಡ್ಜ್‌ಗಳು, ಸಮುದಾಯ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಹೊರಗಿನವರು ಮತ್ತು ಮತದಾರರಲ್ಲದವರನ್ನು ಕ್ಷೇತ್ರದಿಂದ ಹೊರಹಾಕುತ್ತಿದ್ದಾರೆ. ಪಂಜಾಬ್ ರಾಜ್ಯಕ್ಕೆ ವಿಧಾನಸಭೆಯನ್ನು ಆಯ್ಕೆ ಮಾಡಲು ಭಾನುವಾರ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.








