ಮೀನುಗಾರರ ಬಲೆಗೆ ಬಿದ್ದ ಹಾರುವ ಮೀನು Saaksha Tv
ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ ಎರಡು ರೆಕ್ಕೆ ಇರುವ ಮೀನು.
ಎರಡು ದಿನಗಳ ಹಿಂದೆ ಮಂಗಳೂರಿನ ಲೋಕೇಶ್ ಬೆಂಗ್ರೆ ಎಂಬುವರು ಆಳಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದರು. ಆಗ ಧಕ್ಕೆಯ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನನ್ನು ಮೀನುಗಾರ ಪತ್ತೆ ಹಚ್ಚಿದ್ದಾರೆ. ಈ ಮೀನಿಗೆ ಆಂಗ್ಲಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಮತ್ತು ತುಳುವಿನಲ್ಲಿ ಪಕ್ಕಿಮೀನು ಎಂದು ಕರೆಯುತ್ತಾರೆ.
ಈ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ಇವು ಸಮುದ್ರ ನೀರಿನಿಂದ ಮೇಲೆ ಬಂದು ಹಕ್ಕಿಗಳಂತೆ ಹಾರಾಡುವ ಸಾಮರ್ಥ್ಯ ಹೊಂದಿವೆ. ಈ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪ. ಈ ಅಪರೂಪದ ಮೀನು ಮೀನುಗಾರರ ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ.








