ಶ್ರೀಲಂಕಾ ನೌಕಾಪಡೆ ಬಂಧಿಸಿದ್ದ 47 ಮಿನುಗಾರರು ಚೆನೈಗೆ ವಾಪಸ್…..
ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನ ಬಿಡುಗಡೆ ಮಾಡಿದೆ. ಬಿಡುಗಡೆಯಾದ 47 ಮೀನುಗಾರರು ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ಬಂದಿಳಿದಿದ್ದಾರೆ.
ಶುಕ್ರವಾರ ಭಾರತಕ್ಕೆ ಮರಳಿದ ಮೀನುಗಾರರು ತಮಿಳುನಾಡಿನ ರಾಮೇಶ್ವರಂ, ನಾಗಪಟ್ಟಣಂ ಮತ್ತು ಪುದುಕೊಟ್ಟೈ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಾಗ ಶ್ರೀಲಂಕಾ ನೌಕಾಪಡೆ ಅವರನ್ನು ಬಂಧಿಸಿತ್ತು.
ಡಿಸೆಂಬರ್ ತಿಂಗಳೊಂದರಲ್ಲೇ 56 ಮೀನುಗಾರರನ್ನು ಬಂಧಿಸಲಾಗಿದ್ದು, ಒಂಬತ್ತು ದೋಣಿಗಳು, ಮೀನುಗಾರಿಕೆ ಬಲೆಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೀನುಗಾರರನ್ನು ಶ್ರೀಲಂಕಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಜೈಲಿನಲ್ಲಿ ಇರಿಸಲಾಯಿತು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 47 fishermen reach Chennai after being released from Sri Lankan custody
ಅವರು ಜೈಲು ಪಾಲಾದ ನಂತರ ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದೆ. ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಕೂಡಲೇ ಮೀನುಗಾರರ ಬಿಡುಗಡೆಗೆ ಕ್ರಮಕೈಗೊಂಡಿವೆ.
ಮೀನುಗಾರರ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡ ನಂತರ, ಶ್ರೀಲಂಕಾ ನ್ಯಾಯಾಲಯವು ಜನವರಿಯಲ್ಲಿ 56 ತಮಿಳುನಾಡು ಮೀನುಗಾರರನ್ನು ಬಿಡುಗಡೆ ಮಾಡಿತು ಮತ್ತು ಅವರನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಆದಾಗ್ಯೂ, ರಾಯಭಾರ ಕಚೇರಿ ಅವರನ್ನು ಹಿಂದಕ್ಕೆ ಕಳುಹಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ಹಲವಾರು ಮೀನುಗಾರರು ಕೋವಿಡ್ -19 ಗೆ ಪಾಸಿಟೀವ್ ಗೆ ಒಳಗಾಗಿದ್ದಾರೆ.
ಫೆಬ್ರವರಿ 10 ರಂದು, ತಮಿಳುನಾಡು ಸರ್ಕಾರದ ಕೋರಿಕೆಯ ಮೇರೆಗೆ, ಭಾರತೀಯ ರಾಯಭಾರ ಕಚೇರಿ ವೈರಸ್ ಸೋಂಕಿಗೆ ಒಳಗಾಗದ ಮೀನುಗಾರರನ್ನು ಕಳುಹಿಸಿತು. ಇದರ ಬೆನ್ನಲ್ಲೇ ಇಂದು ಮುಂಜಾನೆ 4.20ಕ್ಕೆ 47 ಮೀನುಗಾರರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರನ್ನು ರಾಜ್ಯ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ವಾಗತಿಸಿದರು.








