ಬಿಜೆಪಿಯವರು ತಾರತಮ್ಯ ಮಾಡಿ ಪ್ರೊಟೆಸ್ಟ್ ಮಾಡಿದವರ ಮೇಲೆ ಕೇಸ್ ಹಾಕಿದ್ದಾರೆ: ಡಿಕೆಶಿ Saaksha Tv
ಬೆಂಗಳೂರು: ಶಿವಮೊಗ್ಗದಲ್ಲಿ ಅವರು ೫೦೦ ಜನ ಗುಂಪುಕೂಡಿಕೊಂಡು ಹೋದವರ ಮೇಲೆ ಕೇಸ್ ದಾಖಲಿಸಿಲ್ಲ. ಆದರೆ ನಮ್ಮವರ 50 ಜನ ಪ್ರತಿಭಟನೆ ಮಾಡಿದರೆ ಕೇಸ್ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ತಾರತಮ್ಯ ಮಾಡಿ ಪ್ರೊಟೆಸ್ಟ್ ಮಾಡಿದವರ ಮೇಲೆ ಕೇಸ್ ಹಾಕಿದ್ದಾರೆ. ಪೊಲೀಸ್ ಇಲಾಖೆ ಕೂಡ ಇವರ ಅಣತಿಯಂತೆ ಕೆಲಸ ಮಾಡುತ್ತಿದೆ. ಡಿಜಿ ಅವರು ಕೇಸರಿ ಶಾಲು ಹಾಕಿಕೊಳ್ಳಲಿ. ಪಾದಯಾತ್ರೆ ಟೈಮ್ ಲ್ಲೂ ಕೊರೋನಾ ಉಲ್ಲಂಘನೆ ಅಂತಾ ನಮ್ಮ ಮೇಲೆ ಕೇಸ್ ಹಾಕಿದರು. ಆದರೆ ಅವರು ಗಂಪುಕೂಡಿಕೊಂಡು ಏನೇ ಮಾಡಿದ್ರು ಕೇಸ್ ಹಾಕಲಿಲ್ಲ ಎಂದು ಹರಿಹಾಯ್ದರು.
ಅಲ್ಲದೇ ಸಿಎಂ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಬ್ಯಾಲೆನ್ಸ್ ಮಾಡ್ತಾರೆ ಅನ್ಕೊಂಡಿದ್ದೇ, ಆದರೆ ಸಿಎಂ ಕೂಡ ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ಈಶ್ವರಪ್ಪ ನಮ್ಮನ್ನು ರಾಷ್ಟ್ರ ದ್ರೋಹಿಗಳಾಂತರಲ್ಲ, ನಾವೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರೆ ಕೇಸ್ ಹಾಕಲಿ. ಸೋಮವಾರ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದೆ. ಇನ್ನೂ ವಿಷಯವನ್ನು ಜನತಾ ನ್ಯಾಯಾಲಯದ ಮುಂದೆ ಇಡುತ್ತೇವೆ ಎಂದು ಹೇಳಿದರು.
ಸದನವನ್ನ ಕಾಂಗ್ರೆಸ್ ಹಾಳುಮಾಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಖುಷಿಗೆ ಮಾತನಾಡಲಿ ಎಂದು ಹೇಳಿದ್ದಾರೆ.









