ಶಿವಮೊಗ್ಗ ಎಸ್ ಪಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಡಿಕೆಶಿ Saaksha Tv
ಬೆಂಗಳೂರು: ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್ ಪಿ ಲಕ್ಷ್ಮಿ ಪ್ರಸಾದ್ ಕರೆ ಮಾಡಿ ಡಿ.ಕೆ ಶಿವಕುಮಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೈಕ್ ರ್ಯಾಲಿ ನಡೆಸಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಏಕೆ ಕೇಸ್ ಇಲ್ಲ? ನಿನ್ನೆ ನಮ್ಮ 15 ಜನ ಹುಡುಗರ ಮೇಲೆ ಎಫ್ ಐ ಆರ್ ಹಾಕಿದ್ದೀರಂತೆ. ಬಿಜೆಪಿ ಹುಡುಗರು ಕೂಡಾ ಈಶ್ವರಪ್ಪ ಅವರನ್ನು ಸ್ವಾಗತ ಮಾಡಿದ್ದಾರೆ. ಕೇಸ್ ಮಾಡೋದಾದರೆ ಎರಡು ಕಡೆಯೂ ಆಗಬೇಕಲ್ವಾ? ಅವರ ಮೇಲೆ ಆಗಿಲ್ವಾ ಎಫ್ ಐ ಆರ್ ಎಂದು ವಿಧಾನಸೌಧದಿಂದಲೇ ಫೋನ್ ಮಾಡಿ ಎಸ್ ಪಿ ಅವರಿಗೆ ಪ್ರಶ್ನಿಸಿದ್ದಾರೆ.
ಕರೆ ಮಾಡಿ ಡಿಕೆಶಿ ಪ್ರಶ್ನಿಸುತ್ತಿದ್ದಂತೆ,ಈ ಕುರಿತಾಗಿ ಪರಿಶೀಲನೆ ನಡೆಸುವುದಾಗಿ ಶಿವಮೊಗ್ಗ ಎಸ್ ಪಿ ಲಕ್ಷ್ಮೀ ಪ್ರಸಾದ್ ಭರವಸೆ ನೀಡಿದ್ದಾರೆ.








